Advertisement

ಗುಣಮಟ್ಟದ ಶಿಕ್ಷಣ ನೀಡಿ: ಜಾರಕಿಹೊಳಿ

04:12 PM Oct 07, 2018 | Team Udayavani |

ಮೂಡಲಗಿ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆಯಡಿ ವಲಯದ 151 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತುಕ್ಕಾನಟ್ಟಿ ಗ್ರಾಮದ ಕೆರಿಸಿದ್ಧೇಶ್ವರ ವನದಲ್ಲಿ ಶನಿವಾರ ನಡೆದ ಗುರುಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2004 ರಿಂದ ಇಲ್ಲಿಯವರೆಗೆ ಒಟ್ಟು 45 ಕೋಟಿ ರೂ. ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣಗೊಳಿಸಲಾಗಿದೆ ಎಂದರು.

Advertisement

ಮೂಡಲಗಿ ಶೈಕ್ಷಣಿಕ ವಲಯ ರಾಜ್ಯದಲ್ಲಿಯೇ ಮುಂಚೂಣಿಗೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸತತ ಮೂರು ವರ್ಷ ರಾಜ್ಯದಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಮೂಡಲಗಿ ವಲಯದ್ದಾಗಿದೆ. ಪ್ರತಿಯೊಬ್ಬರೂ ಸಾಕ್ಷರರನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯಿಂದ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮೂಡಲಗಿ ವಲಯವನ್ನು ಶೇ.100ರಷ್ಟು ವಿದ್ಯಾವಂತರನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಿದರೆ ಪ್ರಯತ್ನಕ್ಕೆ ಫಲ ಸಿಕ್ಕಂತಾಗುತ್ತದೆ. ಶೇ ನೂರರಷ್ಟು ಸಾಕ್ಷರತೆಯಲ್ಲಿ ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.

ಮೂಡಲಗಿ ವಲಯದಿಂದ ರಾಜ್ಯಕ್ಕೆ ಎಲ್ಲ ವಿಧದಲ್ಲೂ ಕೊಡುಗೆ ನೀಡಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾದರೆ ಮಾತ್ರ ಸಮಾಜ ಸುಧಾರಿಸಲು ಸಾಧ್ಯವಿದೆ. ಅದರಲ್ಲೂ ಶಿಕ್ಷಣದಿಂದ ಹಿಂದುಳಿದಿರುವ ತುಕ್ಕಾನಟ್ಟಿ ಜಿಪಂ ಕ್ಷೇತ್ರವನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡುವ ಸಂಕಲ್ಪ ಮಾಡಿದೆ ಎಂದರು.

2004ರಿಂದ ಇಲ್ಲಿಯವರೆಗೆ ಒಟ್ಟು 22 ಹೊಸ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಅತ್ಯಧಿಕ ಸರ್ಕಾರಿ ಪ್ರೌಢ ಶಾಲೆ ಹೊಂದಿರುವ ವಲಯ ನಮ್ಮದಾಗಿದೆ. ಇದರ ಜೊತೆಗೆ ಒಟ್ಟು 9 ವಸತಿ ಶಾಲೆಗಳು ಹಾಗೂ ಒಂದು ವಸತಿ ರಹಿತ ಶಾಲೆಯನ್ನು ಮಂಜೂರು ಮಾಡಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯಾಗಿದೆ. ಕೌಜಲಗಿ, ಬಳ್ಳೋಬಾಳ ಹಾಗೂ ಹಳ್ಳೂರ ಗ್ರಾಮಗಳಲ್ಲಿ ಹೊಸ ಪಿಯುಸಿ ಕಾಲೇಜು ಆರಂಭಿಸಲಾಗಿದೆ ಎಂದರು.

ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರು-ವಿದ್ಯಾರ್ಥಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸತ್ಕರಿಸಿ, ಗೌರವಿಸಿದರು. ತುಕ್ಕಾನಟ್ಟಿಯ ಶಾಂತಾನಂದ ಭಾರತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಿಕ್ಕೋಡಿ ಉಪನಿರ್ದೇಶಕರ ಕಚೇರಿಯ ಇಒ ಅಜಿತ್‌ ಮನ್ನಿಕೇರಿ ಮಾತನಾಡಿದರು.

Advertisement

ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ನಾವಿ, ತಾಪಂ ಸದಸ್ಯ ಪರಶುರಾಮ ಗದಾಡಿ, ಸಿದ್ದಪ್ಪ ಹಮ್ಮನವರ, ಸುಲೋಚನಾ ಶಿವಪ್ಪ ಮರ್ದಿ, ಪ್ರಕಾಶ ಬಾಗೇವಾಡಿ, ಭರಮಪ್ಪ ಉಪ್ಪಾರ, ಭೀಮಶಿ ಗದಾಡಿ, ಯಲ್ಲವ್ವ ಅಂಬಲಿ, ಶೋಭಾ ಬಬಲಿ, ಅಶೋಕ ಖಂಡ್ರಟ್ಟಿ, ನೀಲಕಂಠ ಕಪ್ಪಲಗುದ್ದಿ, ಶಂಕರ ಬಿಲಕುಂದಿ, ಪರಮೇಶ್ವರ ಹೊಸಮನಿ, ವಿಠ್ಠಲ ಸವದತ್ತಿ, ಸುಧೀರ ಜೋಡಟ್ಟಿ, ಭೀಮಶಿ ಮಗದುಮ್ಮ, ಬಸವಂತ ಕಮತಿ, ರಾಮಣ್ಣಾ ಹುಕ್ಕೇರಿ ಸೇರಿದಂತೆ ಅನೇಕರು ಇದ್ದರು. ಬಿಇಒ ಎ.ಸಿ. ಗಂಗಾಧರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next