Advertisement

ಆಶಿಹಾಳ ತಾಂಡಾಕ್ಕೆ ನೀರಿನ ಪೈಪ್‌ಲೈನ್‌

12:42 PM May 03, 2020 | Naveen |

ಮುದಗಲ್ಲ: ಆಶಿಹಾಳ ತಾಂಡಾದಲ್ಲಿ ಬಹುದಿನದ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಪೈಪ್‌ ಲೈನ್‌ ಕಾಮಗಾರಿ ಕೊನೆಗೆ ಆರಂಭವಾಗಿದೆ. ಗುತ್ತಿಗೆದಾರ ಶ್ರೀನಿವಾಸ ಅಮ್ಮಾಪುರ ಕಾಮಗಾರಿ ಆರಂಭಿಸಿದ್ದಾರೆ. ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಆದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿದೆ.

Advertisement

ಕೋವಿಡ್ ಲಾಕ್‌ ಡೌನ್‌ನಿಂದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ತಾಂಡಾದಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಹೊಸ ಪೈಪ್‌ಲೈನ್‌ ಮಾಡಿಕೊಡುವಂತೆ ಜನರು ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪದಿಸಿದ ಗುತ್ತೆದಾರರು 1 ಕಿಮೀ ಪೈಪ್‌ಲೈನ್‌ ಮಾಡಿಕೊಡುವ ಮೂಲಕ ತಾಂಡಾದಲ್ಲಿನ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ ಎಂದು ತಾಂಡಾದ ಮಾನಪ್ಪ, ರಾಜು, ಥಾವರೆಪ್ಪ, ಫೂಲೆಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next