Advertisement
|ಮೈಸೂರಿನ ನಗರಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯ ಮಂತ್ರಿಗಳು ಪ್ರಭಾವ ಬೀರಿ ತಮ್ಮ ಪತ್ನಿಯ ಖಾತೆಗೆ ಹೆಚ್ಚಿನ ಬೆಲೆಯ ಹೌಸ್ ಸೈಟ್‌ನ್ನು ಪರ್ಯಾಯವಾಗಿ ಕಾನೂನು ಮೀರಿ ಪಡೆದಿದ್ದಾರೆ ಅನ್ನುವ ತೀವ್ರವಾದ ಆಪಾದನೆಯನ್ನು ತಮ್ಮ ಸ್ವಂತ ಜಿಲ್ಲೆಯಲ್ಲಿಯೇ ಎದುರಿಸ ಬೇಕಾದ ಪ್ರಸಂಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬಂದಿದೆ.ಈ ಕುರಿತಾಗಿ ಖಾಸಗಿಯಾಗಿ ಸಾಮಾಜಿಕ ಕಾರ್ಯಕರ್ತ ಅಬ್ರಹಾಮ್, ಸ್ನೇಹಮಯಿ ಕೃಷ್ಣ ಕೇೂಟಿ೯ಗೂ ದೂರು ಸಲ್ಲಿಸಿದ್ದಾರೆ ಮತ್ತು ಲೇೂಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ.
Related Articles
Advertisement
ಈ ರಾಜ್ಯ ಪಾಲರಿಗೆ ಅನುಮತಿ ನೀಡಲು ಮನಸ್ಸು ಇಲ್ಲದಿದ್ದರು ಸಹ ಕೇಂದ್ರದ ಒತ್ತಡ ಖಂಡಿತವಾಗಿಯೂ ಇದೆ . ಇದರಲ್ಲಿ ಯಾವುದೇ ಸಂಶಯವಿಲ್ಲ.ಈ ಎಲ್ಲಾ ಸಂದರ್ಭದಲ್ಲಿ ರಾಜ್ಯ ಪಾಲರುಗಳು ತುಂಬಾ ಅಸಹಾಯಕರಾಗಿಯೇ ಇರುತ್ತಾರೆ.ಬಹು ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ.ಅಂದು ಕೇಂದ್ರದಲ್ಲಿ ಎನ್.ಡಿ.ಯೇ.ಸರ್ಕಾರ ಅಡ್ವಾಣಿ ಯವರು ಗೃಹ ಸಚಿವರು.ತಮಿಳುನಾಡಿನಲ್ಲಿ ಎ.ಐ.ಡಿ.ಎಂ.ಕೆ. ಮುಖ್ಯಮಂತ್ರಿ ಜಯಲಲಿತಾ ಮುಖ್ಯಮಂತ್ರಿ. ಅಂದಿನ ಕೇಂದ್ರ ಸರಕಾರಕ್ಕೆ ತಮಿಳುನಾಡಿನ ಡಿ.ಎಂ.ಕೆ.ನಾಯಕ ಕರುಣಾನಿಧಿಯವರ ಬೆಂಬಲ.ಈ ಕರುಣಾನಿಧಿಯವರಿಗೆ ಈ ಜಯಲಲಿತಾರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇ ಬೇಕೆಂಬ ಹಠ..
ಅಂತೂ ಕೊನೆಗೂ ಕೇಂದ್ರ ಸರಕಾರದ ಮೇಲೇ ಒತ್ತಡ ಹಾಕುವ ಪ್ರಯತ್ನ ಮಾಡಿದರು.ಕೊನೆಗೂ ಈ ಒತ್ತಾಯಕ್ಕೆ ಮಣಿಯಲೇ ಬೇಕಾದ ಪರಿಸ್ಥಿತಿ ಬಿಜೆಪಿ ನಾಯಕರಿಗೆ ಬಂತು. ಅಂದು ತಮಿಳುನಾಡು ನಾಡಿನ ರಾಜ್ಯ ಪಾಲೆಯಾಗಿದ್ದವರು ಮುಸ್ಲಿಂ ಲೇಡಿ ಬೇಗಂ ರವರು. ಈ ಬೇಗಂರವರಿಗೆ ಕೇಂದ್ರದಿಂದ ಒಂದು ಮೌಖಿಕವಾದ ಸಂದೇಶ ಬಂತು ಏನೆಂದರೆ ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ ಆರಾಜಕತೆ ಸೃಷ್ಟಿ ಮಾಡಿದೆ ಅನ್ನುವ ಒಂದು ವಾಕ್ಯ ದ ಪತ್ರ ಬರೆಯುವಂತೆ ಕೇಳಿಕೊಂಡಿತ್ತು ಅಂದಿನ ಕೇಂದ್ರ ಗೃಹ ಇಲಾಖೆ.ಆದರೆ ಆದ ಕಥೆಯೇ ಬೇರೆ..ಅದಾಗಲೇ ಈ ಜಯ ಅಮ್ಮ ಈ ಬೇಗಂ ಅಮ್ಮ ತುಂಬಾ ಸ್ನೇಹಿತರಾಗಿ ಬಿಟ್ಟಿದ್ದರು..
ಅಂದು ಈ ಬೇಗಂ ಮೇಡಂ ಕೇಂದ್ರಕ್ಕೆ ಕಳುಹಿಸಿದ ಪತ್ರ ಹೇಗಿತ್ತು ಅಂದರೆ “ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ” ಇದನ್ನು ಓದಿದ ಗೃಹ ಇಲಾಖೆ ಸಚಿವಾಲಯದ ಮೂಲಕ ಇನ್ನೊಂದು ಪತ್ರ ಬೇಗಂರಿಗೆ ಬಂತು. ಬೇಗಂ ನೀವು ಬೇಗ ಡಿಲ್ಲಿಗೆ ಬನ್ನಿ..ಅಂದೇ ಈ ಬೇಗಂ ರಾಜಿನಾಮೆ ಕೊಟ್ಟು ಮನೆಗೆ ಹೇೂದರು.ಇಂದು ಅಷ್ಟೇ ಅಂದು ಅಲ್ಲಿ ಕರುಣಾನಿಧಿ ಇಂದು ಇಲ್ಲಿ ಕುಮಾರ ಸ್ವಾಮಿಯ ಒತ್ತಡಕ್ಕೆ ರಾಜ್ಯ ಪಾಲರಿಗೆ ಮೌಖಿಕ ಸಂದೇಶ ಬಂದಿರ ಬೇಕು.?ಒಂದು ವೇಳೆ ನಮ್ಮ ಮುಗ್ದ ರಾಜ್ಯ ಪಾಲರು ಅನುಮತಿ ನೀಡದೇ ಹೇೂಗಿದ್ದರೆ ಇಷ್ಟರಲ್ಲಿಯೇ ದೆಹಲಿ ತಲುಪಬೇಕಿತ್ತೊ ಏನೊ?ಸಿದ್ದರಾಮಯ್ಯ ಮುಖ್ಯ ಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ?ಕಾನೂನಿನ ದೃಷ್ಟಿಯಿಂದ ಕೊಡ ಬೇಕಾಗಿಲ್ಲ..ನೈತಿಕತೆಯ ಪ್ರಶ್ನೆ ಬಂದರೆ ಕೊಟ್ಟರೂ ಆಶ್ಚರ್ಯ ಪಡ ಬೇಕಾಗಿಲ್ಲ. ಸಿದ್ದರಾಮಯ್ಯ ರಾಜೀನಾಮೆಯಿಂದ ಕಾಂಗ್ರೆಸ್ ಗೆ ಇನ್ನಷ್ಟು ಶಕ್ತಿ ಬರ ಬಹುದು. ಒಂದಿಷ್ಟು ಜಾತಿ ಸಮೀಕರಣದ ಲೆಕ್ಕಾಚಾರವುಾ ಆಗ ಬಹುದು. ಪ್ರಸ್ತುತ ಉಪಮುಖ್ಯ ಮಂತ್ರಿ ಡಿಕೆಶಿಯವರ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ದಾರಿ ಸ್ವಲ್ಪ ಸುಗಮವಾಗಿದೆ ಅಂತಲೂ ಹೇಳ ಬಹುದು. ಅಂತೂ ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಡುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಇದು ಅವರ ಕೊನೆಯ ರಾಜಕೀಯ ಬದುಕಿನ ಮುಖ್ಯಮಂತ್ರಿ ಸ್ಥಾನವಾದ ಕಾರಣ ಈಗ ರಾಜೀನಾಮೆ ಕೊಟ್ಟು ಹೊರಗೆ ಹೋದರೆ ಅವರ ಹೆಸರಿನ ಮುಂದೆ ಒಂದು ಕಪ್ಪು ಚುಕ್ಕೆ ಶಾಶ್ವತವಾಗಿ ಕುಳಿತುಕೊಳ್ಳುತ್ತದೆ..ಇದುವರೆಗಿನ ಸಿದ್ದರಾಮಯ್ಯ ತಮ್ಮ ಸುದೀರ್ಘವಾದ ರಾಜಕೀಯ ಜೀವನದಲ್ಲಿ” ಶುದ್ಧರಾಮಯ್ಯ” ಅನ್ನುವ ಮಾತು ಕೇಳಿಸಿಕೊಂಡಿದ್ದು ಬಿಟ್ಟರೆ ಆಶುದ್ದ ಅನ್ನುವ ಮಾತು ಕೇಳಿಸಿಕೊಳ್ಳಲೇ ಇಲ್ಲ.ಈಗ ನಿವೃತ್ತಿಯ ಅಂಚಿನಲ್ಲಿ ಭ್ರಷ್ಟಾಚಾರದ ಕಿರೀಟ ಹೊತ್ತು ಅಧಿಕಾರದಿಂದ ವಿರಮಿಸಲು ಖಂಡಿತವಾಗಿಯೂ ಅವರ ಮನಸ್ಸು ಒಪ್ಪುವುದಿಲ್ಲ ..ಹಾಗಾಗಿ ಈ ಹಗರಣಕ್ಕೆ ಒಂದುಮುಕ್ತಿ ಹಾಡಿಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ತೆರಳುವುದಂತೂ ಗ್ಯಾರಂಟಿ. ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.