Advertisement
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪತ್ನಿ ನಿವೇಶನ ವಾಪಸ್ ಮಾಡಿರು ವುದು ಸಿದ್ದರಾಮಯ್ಯ ಅವರಿಗೂ ಅಚ್ಚರಿ ತಂದಿದೆ. ಒಬ್ಬ ಗೃಹಿಣಿಯಾಗಿ ಅವರ ಮನಸ್ಸಿಗೆ ಘಾಸಿಯಾಗಿದೆ. ಅವರ ನಿರ್ಧಾರ ಮೆಚ್ಚುವಂತಹದ್ದು ಎಂದರು.ಸಿಎಂ ವಿರುದ್ಧ ದ್ವೇಷದ ರಾಜಕೀಯ ಮಾಡಲಾಗುತ್ತಿದೆ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಹಾಗಾಗಿ ಪಕ್ಷ, ಶಾಸಕರು, ಸಚಿವರು ಸಿಎಂ ಜತೆಗಿದ್ದಾರೆ. ರಾಜೀನಾಮೆ ನೀಡು ಪ್ರಮೇಯವೇ ಇಲ್ಲ. ಸತ್ಯ ಏನು ಎಂಬುದು ಜನರಿಗೆ ಗೊತ್ತಾಗಿದೆ. ಅನಾರೋಗ್ಯ ರಾಜಕೀಯ ರಾಜ್ಯದಲ್ಲಿ ನಡೆದಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಮುಡಾ ವಿಚಾರದಲ್ಲಿ ತಪ್ಪು ಮಾಡಿ ದ್ದೇವೆ. ನಿವೇಶನ ವಾಪಸ್ ತೆಗೆದು
ಕೊಳ್ಳಿ ಎಂದು ಎಲ್ಲಿಯಾದರೂ ಸಿದ್ದರಾಮಯ್ಯ ಅವರ ಪತ್ನಿ ಹೇಳಿದ್ದಾರಾ? ಇಲ್ಲ, ತಮ್ಮ ಪತಿ 40 ವರ್ಷ ರಾಜಕಾರಣದಲ್ಲಿದ್ದಾರೆ. ಅವರ ಮೇಲೆ ಎಲ್ಲಿಯೂ ಕಪ್ಪುಚುಕ್ಕೆ ಇಲ್ಲ. ಹಾಗಾಗಿ ನಿವೇಶನ ವಾಪಸ್ ನೀಡುತ್ತಿರುವುದಾಗಿ ಹೇಳಿದ್ದಾರೆ. ಸೂಕ್ತ ನಿರ್ಧಾರ ಎಂದರು. ಸಿದ್ದರಾಮಯ್ಯ ಪತ್ನಿ ಸಾಧ್ವಿ. ಇಲ್ಲಿಯವರೆಗೆ ಎಲ್ಲಿಯೂ ಕಾಣಿಸಿಕೊಂಡವರಲ್ಲ. ಈ ಬೆಳವಣಿಗೆಗಳನ್ನು ನೋಡಿ ಮನಸ್ಸಿಗೆ ಘಾಸಿ ಆಗಿರಬಹುದು. ಪ್ರಾಮಾಣಿಕ ಜನ ಸೇವೆ ಮಾಡಿದ ತಮ್ಮ ಪತಿ ವಿರುದ್ಧ ಈ ಕ್ಷುಲ್ಲಕ ಕಾರಣಕ್ಕೆ ಇಷ್ಟೆಲ್ಲಾ ಆಗಿದೆ ಎಂಬುದನ್ನು ನೋಡಿ ವಾಪಸ್ ಕೊಟ್ಟಿರಬಹುದು ಎಂದ ಅವರು, ನೆಲದ ಕಾನೂನಿನ ಮೇಲೆ ಗೌರವವಿದೆ. ಕಾನೂನು ಸಲಹೆ ಪಡೆದು, ಮುಂದಿನ ಹೆಜ್ಜೆ ಇಡುತ್ತೇವೆ. ಎಫ್ಐಆರ್ ರದ್ದು ಮಾಡಬೇಕು ಎನ್ನುವುದು ಸೇರಿದಂತೆ ಒಟ್ಟಾರೆ ಪ್ರಕರಣದ ವಿಚಾರದಲ್ಲಿ ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
Related Articles
Advertisement
ಇ.ಡಿ.ಗೆ ಲಗಾಮು ಹಾಕಲು ಸಿಎಂ ಭೇಟಿ: ಸಚಿವ ಪಾಟೀಲ್ಜಾರಿ ನಿರ್ದೇಶನಾಲಯ ಮುಡಾ ಪ್ರಕರಣದ ತನಿಖೆಗೆ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಚ್.ಕೆ. ಪಾಟೀಲ್, ಇ.ಡಿ.ಗೆ ಲಗಾಮು ಹಾಕಲು ಕಾನೂನಿನಲ್ಲಿ ಅವಕಾಶ ಇದೆ. ಅದನ್ನು ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು. ಇದೇ ವಿಚಾರಕ್ಕೆ ಸಿಎಂ ಭೇಟಿ ಮಾಡಿದ್ದೇನೆ ಎಂದರು. ಮುಡಾಕ್ಕೆ ಸೇರಿದ 387 ಕೋಟಿ ಹಣ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಇ.ಡಿ. ವಿಚಾರಣೆ ನಡೆಸಿದರೆ ಅದು ದೇಶದ ದುರಂತ ಆಗುತ್ತದೆ. ಯಾಕೆಂದರೆ ಸರಕಾರದ ಒಂದು ಇಲಾಖೆಯ ಹಣ ಮತ್ತೂಂದು ಇಲಾಖೆಗೆ ಬಳಸಲು ಇ.ಡಿ.ಯ ಅನುಮತಿ ಬೇಕಿಲ್ಲ. ಅದು ಸರಕಾರದ ಜವಾಬ್ದಾರಿ ಹಾಗೂ ಅದರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದರು.