Advertisement
ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪರಿಧಿಯ ಮುಡಾ ವ್ಯಾಪ್ತಿಯಲ್ಲಿನ ಜಮೀನುಗಳ ಉಪಯೋಗವನ್ನು ನಿರ್ದಿಷ್ಟ ಪಡಿಸುವ ಮತ್ತು ಕಳೆದ 10 ವರ್ಷದ ಬೆಳವಣಿ ಗೆಗಳನ್ನು ಅಧಿಕೃತವಾಗಿ ದಾಖಲು ಮಾಡುವ ಮಹಾ ಯೋಜನೆ ಸಿದ್ಧಗೊಳ್ಳುತ್ತಿದೆ.
Related Articles
Advertisement
ಅದರಂತೆ ಆಕ್ಷೇಪ-ಸಲಹೆಗಳ ಪರಿಶೀಲನೆ ನಡೆಯಲಿದೆ. ಅದಾದ ಬಳಿಕ ಅಂತಿಮ ಒಪ್ಪಿಗೆಗಾಗಿ ಸರಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅಂತಿಮ ವಾದ ಅನಂತರ ಹೊಸ ಮಹಾಯೋಜನೆ ಅನುಷ್ಠಾನಕ್ಕೆ ಬರಲಿದೆ.
ಮಂಗಳೂರು ನಗರ ಹಾಗೂ ಗ್ರಾಮಾಂತರ ಈಗ ಇರುವ ಮಹಾ ಯೋಜನೆಗಳಲ್ಲಿ ಕೆಲವು ಸ್ಥಳಗಳ ರಸ್ತೆಗಳನ್ನು ತಪ್ಪಾಗಿ ನಮೂದಿಸಲಾಗಿತ್ತು. ಇದನ್ನು ಹೊಸ ಮಹಾಯೋಜನೆಯಲ್ಲಿ ಸರಿಪಡಿಸುವ ಕಾರ್ಯ ನಡೆಸಲಾ ಗುತ್ತಿದೆ. ಮುಡಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಚಟುವಟಿಕೆ ಹಾಗೂ ಅದರ ಪರಿಣಾಮ ಮತ್ತು ರಸ್ತೆ ಸಹಿತ ಅಲ್ಲಿ ಆಗಬೇಕಾದ ಕಾರ್ಯಯೋಜನೆ ಬಗ್ಗೆ ಇದರಲ್ಲಿ ಬೊಟ್ಟು ಮಾಡಲಾಗುತ್ತದೆ.
ಮುಡಾ ನಿಕಟಪೂರ್ವ ಅಧ್ಯಕ್ಷ ರವಿಶಂಕರ ಮಿಜಾರ್ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಹಾ ಯೋಜನೆ 2021ರಲ್ಲಿಯೇ ಆಗ ಬೇಕಿತ್ತು. ಆದರೆ ಕೊರೊನಾ ಕಾರಣ ದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೊನೆಯ ಹಂತದಲ್ಲಿದೆ. ಕೃಷಿ, ಬಯಲು, ಹಸುರು ವಲಯ ಸೇರಿದಂತೆ ವಿವಿಧ ಪ್ರಕಾರಗಳನ್ನು ಇದರಲ್ಲಿ ಗೊತ್ತುಪಡಿಸಲಾಗುತ್ತದೆ. ಅಭಿವೃದ್ಧಿ ಕಾರ್ಯ ನಡೆಸುವಾಗ ಪರಿಸರಕ್ಕೆ ಹಾನಿ ಆಗದಂತೆ ಅದರ ಗುರುತು ಮಾಡುವ ಕಾರ್ಯ ಮಹಾಯೋಜನೆಯಿಂದ ಸಾಧ್ಯವಾಗಲಿದೆ ಎಂದರು.