Advertisement
ಬೆಂಗಳೂರಿನ ಶಾಂತಿನಗರದ ಟಿಟಿಎಂಸಿ ಬಸ್ ನಿಲ್ದಾಣದ ಕಟ್ಟಡದಲ್ಲಿರುವ ಜಾರಿ ನಿರ್ದೇಶನಾಲಯಕ್ಕೆ ಬೆಳಗ್ಗೆ 11ರ ಸುಮಾರಿಗೆ ಬಂದ ಮೂವರನ್ನು ಇ.ಡಿ. ಅಧಿಕಾರಿಗಳು ರಾತ್ರಿ 9.30ರ ವರೆಗೂ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಶಿವಣ್ಣ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.
ಈ ವೇಳೆ ಮುಡಾ ಹಗರಣದಲ್ಲಿ ತಮ್ಮ ಪಾತ್ರ ಮತ್ತು ಸಿದ್ದರಾಮಯ್ಯ ಪಾತ್ರ ಏನು? ಮುಡಾದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ರಾಜಕೀಯವಾಗಿ ಯಾರಾದರೂ ಪ್ರಭಾವ ಬೀರಿದ್ದಾರೆಯೇ? ಯಾವ ಮಾನದಂಡಗಳ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು? 50-50 ಅನುಪಾತದಲ್ಲಿ ನಿವೇಶನ ಹಂಚಿಕೆ ಸೂತ್ರ ಅನುಸರಿಲಾಗಿದೆಯೇ? ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಯಾವ ಆಧಾರದ ಮೇಲೆ ಹೆಚ್ಚುವರಿ ನಿವೇಶನ ನೀಡಲಾಗಿದೆ ಎಂಬ ಪ್ರಶ್ನೆಗಳೂ ಸೇರಿದಂತೆ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಇನ್ನು ಮಾಜಿ ತಹಶೀಲ್ದಾರ್ ಹಾಗೂ ಮುಡಾ ಮಾಜಿ ಕಾರ್ಯದರ್ಶಿ ಮಾಳಿಗೆ ಶಂಕರ್ ಅವರನ್ನು 9.5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಮುಡಾ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಶಂಕರ್, ಮುಡಾ ಕಾರ್ಯದರ್ಶಿಯಾಗಿದ್ದರು. ಹೀಗಾಗಿ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Related Articles
ಮತ್ತೂಂದೆಡೆ ಬಿಲ್ಡರ್ ಮಂಜುನಾಥ್ ಆಪ್ತ ಸಹಾಯಕನಿಗೆ ಕಾರಿನಲ್ಲಿ ಮೈಸೂರಿನ ಶಿವಣ್ಣ ಅವರು 25 ಲಕ್ಷ ರೂ. ನಗದು ಕೊಟ್ಟಿದ್ದರು. ಈ ಸಂಬಂಧ ಹಣ ಎಣಿಸುತ್ತಿರುವ 1.38 ನಿಮಿಷದ ದೃಶ್ಯ ವೀಡಿಯೋ ಸಮೇತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ 25 ಲಕ್ಷ ರೂ. ಮೂಲ ಯಾವುದು? ಯಾವ ಕಾರಣಕ್ಕೆ ಮಂಜುನಾಥ್ ಆಪ್ತನಿಗೆ ಹಣ ನೀಡಲಾಗಿದೆ ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಸಂಜೆ 7 ಗಂಟೆ ಸುಮಾರಿಗೆ ವಿಚಾರಣೆ ಸಂದರ್ಭದಲ್ಲೇ ಶಿವಣ್ಣನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಏನೇನಾಯ್ತು?ಬೆಂಗಳೂರಿನ ಇ.ಡಿ. ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭ
ಮಾಜಿ ಕಾರ್ಯದರ್ಶಿ ಮಾಳಿಗೆ ಶಂಕರ್, ಮೈಸೂರಿನ ಶಿವಣ್ಣರಿಗೂ ಪ್ರಶ್ನೆಗಳ ಸುರಿಮಳೆ
ಮೂವರನ್ನೂ ರಾತ್ರಿ 9.30ರ ವರೆಗೂ ವಿಚಾರಣೆಗೊಳಪಡಿಸಿದ ಅಧಿಕಾರಿಗಳು
ಮುಡಾ ಹಗರಣದಲ್ಲಿ ತಮ್ಮ ಪಾತ್ರ ಮತ್ತು ಸಿದ್ದರಾಮಯ್ಯ ಪಾತ್ರದ ಬಗ್ಗೆ ಪ್ರಶ್ನೆ
ಮೈಸೂರು ಶಿವಣ್ಣಗೆ ಎದೆನೋವು, ಆಸ್ಪತ್ರೆಗೆ ದಾಖಲು