Advertisement
ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತನಿಖಾಧಿಕಾರಿ ವಿಚಾರಣೆಯನ್ನು ಎಷ್ಟು ಗಂಟೆಗೆ ಮುಗಿಸುತ್ತಾರೆ ಎಂಬುದು ಮುಖ್ಯಮಂತ್ರಿ ಕಚೇರಿಗೆ ಹೇಗೆ ಗೊತಾಗುತ್ತದೆ? ಮೈಸೂರಿಗೆ ಬೆಳಗ್ಗೆ 10 ಗಂಟೆಗೆ ತಲುಪುವ ಸಿಎಂ, ಮಧ್ಯಾಹ್ನ 12 ಗಂಟೆಗೆ ಚನ್ನಪಟ್ಟಣ ಪ್ರಚಾರಕ್ಕಾಗಿ ಮೈಸೂರಿನಿಂದ ಹೊರಡುವ ಬಗ್ಗೆ ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಹಾಕಿದ್ದಾರೆ. ಅಂದರೆ, ತನಿಖೆಯ ಸಮಯವನ್ನೂ ಸಿಎಂ ಕಚೇರಿಯೇ ನಿಗದಿಪಡಿಸಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.
Related Articles
ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ಕಳೆದ 16 ತಿಂಗಳ ಇವರ ಪುಸ್ತಕ ತೆರೆದರೆ ಬರೀ ಲೂಟಿಯ ಕಪ್ಪುಚುಕ್ಕಿಗಳಿದ್ದು, ಒಂದೂ ಬಿಳಿ ಚುಕ್ಕಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ನಿವೇಶನ ಲೂಟಿ ಮಾಡಿ ತಾವೇ ನೇಮಿಸಿದ ಪೊಲೀಸ್ ಅಧಿಕಾರಿ ಮುಂದೆ ತನಿಖೆಗೆ ಕುಳಿತುಕೊಳ್ಳಲು ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.
Advertisement
ಸಿದ್ದರಾಮಯ್ಯರ ಪುಸ್ತಕದಲ್ಲಿ ನಾವು ತೆರೆದ ಪುಟದಲ್ಲೆಲ್ಲ ಮುಡಾ ಹಗರಣ, ಅಬಕಾರಿ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿ ಹಗರಣಗಳೇ ತುಂಬಿವೆ. ಸಿದ್ದರಾಮಯ್ಯನವರು 62 ಕೋಟಿ ಕೊಟ್ಟರೆ ಸೈಟ್ ವಾಪಸ್ ಕೊಡುವುದಾಗಿ ಹೇಳಿದ್ದರು. ಬಳಿಕ 14 ಸೈಟ್ ಹಾಗೆ ಏಕೆ ವಾಪಸ್ ಕೊಟ್ಟರು? ವಾಲ್ಮೀಕಿ ನಿಗಮದ ಹಗರಣ ಸಂಬಂಧ ನಾಗೇಂದ್ರ ಪತ್ರಿಕಾಗೋಷ್ಠಿ ಮಾಡಿ ನಾನು ನಿರಪರಾಧಿ ಎಂದಿದ್ದರು. ಯಾಕೆ ಅವರು ಜೈಲಿಗೆ ಹೋದರು? ಎಂದು ಕೇಳಿದರು.