Advertisement

MUDA Case: ಇ.ಡಿ. ವಿಚಾರಣೆಗೆ ಮುಡಾ ಮಾಜಿ ಆಯುಕ್ತ ದಿನೇಶ್‌ ಹಾಜರು ?

03:10 AM Nov 07, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇ.ಡಿ. ವಿಚಾರಣೆಗೆ ಹಾಜರಾಗಿರುವ ಕುರಿತು ವದಂತಿ ಹಬ್ಬಿದ್ದು ಈ ಬಗ್ಗೆ ಇ.ಡಿ. ಮೂಲಗಳು ದೃಢಪಡಿಸಿಲ್ಲ. ಇದರ ಜತೆಗೆ ಮುಡಾ ಸುಳಿಯಲ್ಲಿ ಸಿಲುಕಿರುವ ಇನ್ನೂ ಕೆಲವು ಅಧಿಕಾರಿಗಳಿಗೆ ಸಮನ್ಸ್‌ ನೀಡಲು ಇ.ಡಿ. ಸಿದ್ಧತೆ ನಡೆಸಿದೆ.

Advertisement

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್‌ ಜಾರಿ ಮಾಡಿತ್ತು. ಅ.28ರಂದು ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಬೆಂಗಳೂರಿನ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ವಾಕಿಂಗ್‌ ಮಾಡುತ್ತಿದ್ದ ದಿನೇಶ್‌ ಕುಮಾರ್‌, ಮನೆ ಮೇಲೆ ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಪರಾರಿಯಾಗಿದ್ದರು. ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ಅವರ ಮನೆಗೆ ನೋಟಿಸ್‌ ಅಂಟಿಸಿದ್ದರು.

ಇದೀಗ ಬುಧವಾರ ಶಾಂತಿನಗರದಲ್ಲಿರುವ ಇ.ಡಿ. ಕಚೇರಿಗೆ ದಿನೇಶ್‌ ಕುಮಾರ್‌ ಹಾಜರಾಗಿರುವ ವದಂತಿಗಳು ಹಬ್ಬಿವೆ. ದಿನೇಶ್‌ ಕುಮಾರ್‌ ಹಾಜರಾಗಿರುವುದನ್ನು ಇ.ಡಿ. ಮೂಲಗಳು ದೃಢಪಡಿಸಿಲ್ಲ. ಒಂದು ವೇಳೆ ಇ.ಡಿ. ಎದುರು ವಿಚಾರಣೆಗೆ ಹಾಜರಾಗದೇ ಇದ್ದರೆ ದಿನೇಶ್‌ ಕುಮಾರ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next