Advertisement

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವೀಡಿಯೊ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

09:01 PM Oct 28, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿರುವ ವೇಳೆಯಲ್ಲೇ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ತಮ್ಮ ದೂರಿಗೆ ಪೂರಕವಾಗಿ ತನಿಖಾ ಸಂಸ್ಥೆ ಇಡಿಗೆ ‘ವೀಡಿಯೊ ಪುರಾವೆ’ ಸೋಮವಾರ(ಅ28) ಹಸ್ತಾಂತರಿಸಿದ್ದಾರೆ.

Advertisement

ಆಪಾದಿತ ಹಗರಣದ ದೂರುದಾರರಲ್ಲಿ ಒಬ್ಬರಾಗಿರುವ ಸ್ನೇಹಮಯಿ ಕೃಷ್ಣ ಅವರು ಇತ್ತೀಚೆಗೆ ಇಡಿ ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದರು.ಇಡಿ ಹೆಚ್ಚುವರಿ ನಿರ್ದೇಶಕರಿಗೆ ಬ ಕೃಷ್ಣ ಅವರು ವಿಡಿಯೋ ನೀಡಿದ್ದು ವಾಹನದ ಹಿಂದಿನ ಸೀಟಿನಲ್ಲಿ ಹಣದ ಬಂಡಲ್‌ಗಳನ್ನು ಎಣಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ, ಆದರೆ ಮುಂಭಾಗದ ಸೀಟಿನಲ್ಲಿರುವ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಯುತ್ತಿದೆ. ಸಂಭಾಷಣೆಯಲ್ಲಿ 25 ಲಕ್ಷ ರೂಪಾಯಿಗಳ ಮೊತ್ತವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಆರೋಪಿಸಿದ್ದಾರೆ.

ವಿಡಿಯೋದಲ್ಲಿ ನಗದು ವ್ಯವಹಾರ ನಡೆದಿದೆ ಎನ್ನಲಾದ ವ್ಯಕ್ತಿಗಳ ಹೆಸರುಗಳನ್ನು ಹಂಚಿಕೊಂಡಿರುವ ಕೃಷ್ಣ, ಇಡಿ ಅಧಿಕಾರಿಯನ್ನು ಕರೆಸಿ, ವಿಡಿಯೋ ಪರಿಶೀಲಿಸಿ, ವಿಚಾರಣೆ ನಡೆಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಜತೆಗಿನ 50:50 ಅನುಪಾತದಲ್ಲಿನ ವಹಿವಾಟಿನ ಕುರಿತು ವಿವರ ಸಂಗ್ರಹಿಸುವಂತೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next