Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಸಿದ್ದರಾಮಯ್ಯ ಅವರ ಪತ್ನಿ ಅವರ 3.16 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿರುವುದಕ್ಕೆ ಬದಲಿಯಾಗಿ ಕಾನೂನು ಪ್ರಕಾರ1-2 ನಿವೇಶನ ನೀಡಬೇಕು. ಆದರೆ, ಮೈಸೂರಿನ ಮಧ್ಯ ಭಾಗದಲ್ಲಿ ಅತಿ ಹೆಚ್ಚು ಬೆಲೆ ಬಾಳುವ 14 ನಿವೇಶನಗಳ ಪಡೆದಿರುವುದೇ ಭ್ರಷ್ಟಾಚಾರ ಎಂದು ದೂರಿದರು.
Related Articles
Advertisement
ವಾಲ್ಮೀಕಿ ಅಭಿವೃದ್ಧಿ ಹಗರಣದಲ್ಲಿ 187 ಕೋಟಿ ಅವ್ಯವಹಾರ ಆಗಿದೆ. ನ್ಯಾಯಸಮ್ಮತವಾದ ತನಿಖೆಗಾಗಿ ಹಣ ಕಾಸು ಇಲಾಖೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಕ್ಕೆ ಸೇರಿರುವ ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದು ಜಾತಿಯ ಬಗ್ಗೆ ಹೇಳಿಕೆ ನೀಡಿರುವುದು ಒಳ್ಳೆಯ ಮಾತಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್ ಕಾಲದಲ್ಲಿ ಬಹಳಷ್ಟು ಹಗರಣ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಸಭೆಯೊ ಂದರಲ್ಲಿ ಹೇಳಿದ್ದಾರೆ. ಅವರದ್ದೇ ಸರ್ಕಾರ ಇದೆ ತನಿಖೆ ನಡೆಸಲಿ, ಯಾರು ಹಗರಣ ಮಾಡಿದ್ದಾರೆ. ಯಾರು ಪಾಲುದಾರರಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾರೇ ತಪ್ಪು ಮಾಡಿರಲಿ ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಮಾಜಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದರು.
ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಕಾರಣ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. 26 ಸಾವಿರ ವೋಟ್‌ನಲ್ಲಿ ಸೋತಿದ್ದೇವೆ. ಸೋಲಿಗೆ ಕಾರಣವನ್ನ ಮತ್ತೆ ಮತ್ತೆ ಹೇಳುವುದರಲ್ಲಿ ಅರ್ಥ ಇಲ್ಲ. ಶಾಸಕ ಹರೀಶ್ ಅವರು ಹೇಳಿಕೆ ನೀಡಿದ್ದಾರೆ ಎಂದರೆ ಅವರಿಗೆ ಸತ್ಯ ಗೊತ್ತಿರಬಹುದು. ಮಾಹಿತಿ ಇರಬಹುದು. ಆ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ. ನಾನೇ ಎಲೆಕ್ಷನ್‌ನಲ್ಲಿ ನಿಲ್ಲಬೇಕಿತ್ತು ಅನಿಸುತ್ತಿದೆ. ಆದರೆ, ಆಗ ಆರೋಗ್ಯ ಚೆನ್ನಾಗಿರಲಿಲ್ಲ. ಈಗ ರಿಲ್ಯಾಕ್ಸ್ ಆಗಿದ್ದೇನೆ. ಎಲೆಕ್ಷನ್ ಸೋತ ನಂತರ ಮೌನವಾಗಿಲ್ಲ. ಇನ್ನೂ ಆಕ್ಟಿವ್ ಆಗಿದ್ದೇನೆ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.