Advertisement
ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಸಂಪರ್ಕ ರಸ್ತೆಯ ಹಲವು ದಶಕಗಳ ಗೋಳು ಇದು. ರಸ್ತೆ ಅಭಿವೃದ್ಧಿ ಅನ್ನುವುದು ಬರೀ ಭರವಸೆಯ ಮಾತಾಗಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಅನ್ನುವ ಆಕ್ರೋಶ ಸ್ಥಳೀಯರದ್ದು.
Related Articles
Advertisement
ಮಳೆಗಾಲ ಬಂತೆಂದರೆ ಕುವೆತಡ್ಕದಿಂದ ಪೆರುವೋಡಿ ದೇವಾಲಯದ ತನಕ ರಸ್ತೆ ಜಾರು ಬಂಡಿಯಾಗಿ ಬದಲಾಗುತ್ತದೆ. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ರಸ್ತೆ ದಾಟಿಸುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿ ಹಲವು ಬಾರಿ ಎದುರಾಗಿದೆ. ಕೃಷಿಕರೇ ಹೆಚ್ಚಾಗಿ ಇರುವ ಇಲ್ಲಿ ಕೃಷಿ ಉತ್ಪನ್ನ ಸಾಗಾಟಕ್ಕೆ ಪರದಾಡುವ ಪರಿಸ್ಥಿತಿ ಇದೆ. ದೇವಾಲಯಕ್ಕೆ ಬರುವ ಭಕ್ತರಿಗೂ ಸಂಚಾರ ಸವಾಲಾಗಿದೆ. ಈ ರಸ್ತೆಯ ಕಂಡಿಪ್ಪಾಡಿ ತಿರುವಿನ ಕುವೆತಡ್ಕ ಬಳಿ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲಿ ತುಂಬಿ ನಡೆದಾಡಲು ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ. ವಾಹನಗಳು ಇಲ್ಲಿ ಹೂತು ಹೋಗಿ ಎಳೆದೊಯ್ದ ಅನೇಕ ನಿದರ್ಶನಗಳು ಇವೆ. ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವ ಚರಂಡಿ ನಿರ್ಮಿಸಿ ಮೋರಿ ಅಳವಡಿಸಬೇಕಿದೆ. ಆ ಬಗ್ಗೆ ಕೂಡ ಗಮನ ಹರಿಸಿಲ್ಲ.
ಅನುದಾನ ಭರವಸೆಯಷ್ಟೇ
ಅನುದಾನ ಅನ್ನುವುದು ಇಲ್ಲಿ ಭರವಸೆ ಗಷ್ಟೇ ಸೀಮಿತ. ಅದು ಕಾರ್ಯರೂಪಕ್ಕೆ ಬಂದಿಲ್ಲ. ಲಕ್ಷಗಟ್ಟಲೆ ರೂಪಾಯಿ ಅನುದಾನ ಇದೆ ಎನ್ನುತ್ತಾರೆ. ಇಂತಹ ಆಶ್ವಾಸನೆಗೆ ಹಲವು ವರ್ಷಗಳು ಕಳೆದಿವೆ. ಆದರೆ ಅಭಿವೃದ್ಧಿ ಆಗಿಲ್ಲ ಅನ್ನುತ್ತಾರೆ ಸ್ಥಳೀಯರು.
ಸವಾಲಿನ ಸಂಚಾರ
ಕೊರಗ ಸಮುದಾಯದ ಹಲವು ಕುಟುಂಬಗಳು ಜಾಲ್ಪಣೆಯಲ್ಲಿ ವಾಸಿಸುತ್ತಿದ್ದು ಅವರಿಗೇ ಇದೇ ರಸ್ತೆ ಸಂಪರ್ಕ ರಸ್ತೆಯಾಗಿದೆ. ಈ ಭಾಗದಿಂದ ಬೆಳ್ಳಾರೆ, ಕಾಣಿಯೂರು, ಸುಳ್ಯ, ಪುತ್ತೂರು ತಾಲೂಕಿನ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದು ದೈನಂದಿನ ಸಂಚಾರ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ರಸ್ತೆ ಫಲಾನುಭವಿ ರಮೇಶ್ ಕುವೆತಡ್ಕ