Advertisement

ನೊವಾಕ್‌ ಜೊಕೋವಿಕ್‌ಗೆ ಪ್ರಶಸ್ತಿ

12:30 AM Dec 31, 2018 | |

ಅಬುಧಾಬಿ: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ 4ನೇ ಬಾರಿ “ಮುಬಾದಾಲ ವಿಶ್ವ ಟೆನಿಸ್‌ ಚಾಂಪಿಯನ್‌ಶಿಪ್‌’ ಪ್ರಶಸ್ತಿ ಜಯಿಸಿದ್ದಾರೆ. ಇದರೊಂದಿಗೆ ರಫೆಲ್‌ ನಡಾಲ್‌ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ.
ಫೈನಲ್‌ ಪಂದ್ಯದಲ್ಲಿ ಜೊಕೋವಿಕ್‌ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ವಿರುದ್ಧ 4-6, 7-5, 7-5 ಅಂತರದಿಂದ ಗೆದ್ದರು.

Advertisement

“ಇಂತಹ ಪಂದ್ಯಗಳನ್ನು ಆಡಲು ನನಗೆ ತುಂಬ ಇಷ್ಟ, ಆ್ಯಂಡರ್ಸನ್‌ ಆರಂಭದಲ್ಲೇ ತೀವ್ರ ಪೈಪೋಟಿ ನೀಡಿ ದ್ದಾರೆ. ನನ್ನಂತೆಯೇ ಆ್ಯಂಡರ್ಸನ್‌ ಕೂಡ ಜಯ ಬಯಸಿದ್ದರು. ನಮ್ಮಿಬ್ಬರ ನಡುವೆ ಇದ್ದ ಒತ್ತಡವನ್ನು ನಾನು ಗಮನಿಸಿದ್ದೇನೆ. ಈ ಪಂದ್ಯದ ಮೂಲಕ ಹಲವು ಧನಾತ್ಮಕ ವಿಚಾರಗಳನ್ನು ತೆಗೆದು ಕೊಳ್ಳುತ್ತೇನೆ. ಆ್ಯಂಡರ್ಸನ್‌ ವಿಶ್ವದ ಉತ್ತಮ ಆಟಗಾರ. ಇಂತಹ ಪಂದ್ಯ ಗಳು ನಮ್ಮಲ್ಲಿ ಆತ್ಮವಿಶ್ವಾಸ, ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತವೆ’ ಎಂದು ಜೊಕೋವಿಕ್‌ ಪ್ರತಿಕ್ರಿಯಿಸಿದ್ದಾರೆ. 

ಸೋದರನೊಂದಿಗೆ ಡಬಲ್ಸ್‌
ವಿಂಬಲ್ಡನ್‌ ಹಾಗೂ ಯುಎಸ್‌ ಓಪನ್‌ ಚಾಂಪಿಯನ್‌ ಜೊಕೋವಿಕ್‌ ಸೋಮವಾರ ಆರಂಭವಾಗಲಿರುವ “ಕತಾರ್‌ ಓಪನ್‌’ ಟೂರ್ನಿಯಲ್ಲಿ ಆಡಲು ದೋಹಾಕ್ಕೆ ತೆರಳಲಿದ್ದಾರೆ. ಕತಾರ್‌ ಓಪನ್‌ನಲ್ಲಿ ಜೊಕೋವಿಕ್‌ ಸಿಂಗಲ್ಸ್‌ ವಿಭಾಗದಲ್ಲಿ ಮಾತ್ರವಲ್ಲದೆ, ಸಹೋದರ ಮಾರ್ಕೊ ಜೊಕೋವಿಕ್‌ ಜತೆಯಾಗಿ ಡಬಲ್ಸ್‌ ವಿಭಾಗದಲ್ಲೂ ಆಡಲಿದ್ದಾರೆ. 2013ರ ಅನಂತರ ಈ ಜೋಡಿ ಮತ್ತೆ ಡಬಲ್ಸ್‌ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
 

Advertisement

Udayavani is now on Telegram. Click here to join our channel and stay updated with the latest news.

Next