Advertisement
ದೇಶದ ಭೌಗೋಳಿಕ ವಿಸ್ತಾರದಲ್ಲಿ ಸುಮಾರು 63.4 ಮಿಲಿಯ ಘಟಕಗಳೊಂದಿಗೆ ಎಂಎಸ್‌ಎಂಇ ಉತ್ಪಾದನ ಜಿಡಿಪಿಯ ಸುಮಾರು ಶೇ. 6.11 ಮತ್ತು ಸೇವಾ ಚಟುವಟಿಕೆಗಳಿಂದ ಜಿಡಿಪಿಯ ಶೇ. 24.63 ಮತ್ತು ಭಾರತದ ಉತ್ಪಾದನೆಯ ಶೇ. 33.4ರಷ್ಟು ಕೊಡುಗೆ ನೀಡುತ್ತಿವೆ. ಎಂಎಸ್‌ಎಂಇಗಳು ಸುಮಾರು 120 ಮಿಲಿಯ ಜನರಿಗೆ ಉದ್ಯೋಗ ಒದಗಿಸಲು ಸಮರ್ಥ ವಾಗಿವೆ ಮತ್ತು ಭಾರತದ ಒಟ್ಟಾರೆ ರಫ್ತಿನ ಶೇ. 45ರಷ್ಟು ಕೊಡುಗೆ ನೀಡುತ್ತಿವೆ. ವಲಯವು ಸತತವಾಗಿ ಶೇ. 10ಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ. ಸುಮಾರು ಶೇ. 20 ಎಂಎಸ್‌ಎಂಇಗಳು ಗ್ರಾಮೀಣ ಪ್ರದೇಶಗಳಿಂದ ಹೊರಗಿವೆ. ಇದು ಎಂಎಸ್‌ಎಂಇ ವಲಯದಲ್ಲಿ ಗಮ ನಾರ್ಹವಾದ ಗ್ರಾಮೀಣ ಉದ್ಯೋಗಿಗಳ ನಿಯೋಜನೆಯನ್ನು ಸೂಚಿಸುತ್ತದೆ ಹಾಗೂ ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮತ್ತು ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುವಲ್ಲಿ ಈ ಉದ್ಯಮಗಳ ಪ್ರಾಮುಖ್ಯತೆಯ ಪ್ರದರ್ಶನ ವಾಗಿದೆ.
ಕೇಂದ್ರ ಸರಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕಾರ್ಮಿಕರು, ಮಧ್ಯಮ ವರ್ಗ ಮತ್ತು ಇತರರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಆತ್ಮನಿರ್ಭರ ಭಾರತ ಅಭಿಯಾನ (ಎಬಿಎ) ಅಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದೆ. ಎಂಎಸ್‌ಎಂಇಗೆ ಹೊಸ ವ್ಯಾಖ್ಯಾನ (2020)
ಅತೀ ಸಣ್ಣ ಕೈಗಾರಿಕೆ: ಒಂದು ಕೋಟಿ ರೂಪಾಯಿ ವರೆಗಿನ ಹೂಡಿಕೆ ಮತ್ತು 5 ಕೋಟಿ ರೂಪಾಯಿ ವರೆಗಿನ ವಹಿವಾಟು ಹೊಂದಿರುವ ಕಂಪೆನಿ
ಸಣ್ಣ ಕೈಗಾರಿಕೆ: 10 ಕೋಟಿ ರೂಪಾಯಿ ವರೆಗಿನ ಹೂಡಿಕೆ ಹಾಗೂ 50 ಕೋಟಿ ರೂ. ವರೆಗಿನ ವಹಿವಾಟು ಹೊಂದಿರುವ ಕಂಪೆನಿ
ಮಧ್ಯಮ ಕೈಗಾರಿಕೆ: 20 ಕೋಟಿ ರೂಪಾಯಿ ವರೆಗಿನ ಹೂಡಿಕೆ ಹಾಗೂ 200 ಕೋಟಿ ರೂಪಾಯಿ ವರೆಗಿನ ವಹಿವಾಟನ್ನು ಹೊಂದಿರುವ ಕಂಪೆನಿ ಇದರ ಜತೆಗೆ ವಹಿವಾಟು ಮತ್ತು ಹೂಡಿಕೆ ಯ ಮಾನದಂಡಗಳು ಸಂಯೋಜಿತವಾಗಿವೆ.
Related Articles
ಎಲ್ಲ ಪ್ರಸ್ತುತ ಉದ್ಯೋಗ್ ಆಧಾರ್ ನೋಂದಾಯಿಸಿದ ಘಟಕಗಳು ಉದ್ಯಮ್ ಆಧಾರ್ MSME ಪೋರ್ಟಲ್ https://udyamregistration.gov.in ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. 2021ರ ಎಪ್ರಿಲ್ 1ರಿಂದ ಉದ್ಯಮ ನೋಂದಣಿ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿ ಅಥವಾ ಉದ್ಯಮವು ಪ್ರತೀ ಹಣಕಾಸು ವರ್ಷದ ಕೊನೆಯಲ್ಲಿ ಹೊಸದಾಗಿ ಆನ್‌ಲೈನ್‌ನಲ್ಲಿ ತನ್ನ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯ. ಅಂತಹ ಉದ್ಯಮ ಅಥವಾ ವ್ಯಕ್ತಿಯು ತಮ್ಮ ಆದಾಯ ತೆರಿಗೆ ರಿಟರ್ನ್ ಮತ್ತು ಹಿಂದಿನ ಹಣಕಾಸು ವರ್ಷದ ಜಿಎಸ್‌ಟಿ ರಿಟರ್ನ್ ವಿವರಗಳನ್ನು ಮತ್ತು ಸ್ವಯಂ ಘೋಷಣೆಯ ಆಧಾರದ ಮೇಲೆ ಅಗತ್ಯವಿರುವ ಇತರ ಹೆಚ್ಚುವರಿ ಮಾಹಿತಿಯನ್ನು ನವೀಕರಿಸ ಬೇಕಾಗುತ್ತದೆ.
Advertisement
ಸರಕಾರದ ನೀತಿಗಳು ಎಂಎಸ್‌ಎಂಇ ವಲಯವನ್ನು ಹೇಗೆ ಸುಧಾರಿಸಬಹುದು1. ವಲಯದೊಳಗೆ ಡಿಜಿಟಲ್ ಅಳ ವಡಿಕೆಗೆ ಉತ್ತೇಜನ ನೀಡುವುದು
2. ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿ ಸುವುದು
3. ಕೌಶಲದ ಸವಾಲುಗಳನ್ನು ಪರಿಹರಿ ಸುವುದು
4. ಜಿಎಸ್‌ಟಿ ಅನುಸರಣೆ ಸರಳವಾಗಿ ಸುವುದು
5. ಏಕಗವಾಕ್ಷಿ ತೆರವು ಸೌಲಭ್ಯದ ಮೂಲಕ ಎಲ್ಲ ವಿಧದ ಪರವಾನಿಗೆ ಮತ್ತು ಅನುಸರಣೆ ನಿಯಮಾವಳಿಗಳನ್ನು ಸರಾಗಗೊಳಿಸುವುದು
6. ಇ-ಕಾಮರ್ಸ್ ಮೂಲಕ ವಲಯವನ್ನು ವಿಶಾಲ ಮಾರುಕಟ್ಟೆಗಳಿಗೆ ಮಾರ್ಗದರ್ಶನ ಮಾಡುವ ಮಧ್ಯಸ್ಥಿಕೆಗಳನ್ನು ಮಾಡುವುದು
7. ಪರಿಣಾಮಕಾರಿ ನಿಧಿಯ ಮೂಲಕ ಹಣಕಾಸಿನ ನೆರವು
8. ಉತ್ತಮ ಮಾರುಕಟ್ಟೆ ಯೋಜನೆಗಳನ್ನು ಒದಗಿಸುವುದು. – ಸಿಎ ನರಸಿಂಹ ನಾಯಕ್