Advertisement

ಎಂಎಸ್‌ಐಎಲ್‌ 2000 ಕೋಟಿ ದಾಖಲೆ ವಹಿವಾಟು

07:09 AM Jun 20, 2019 | Lakshmi GovindaRaj |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿ., (ಎಂಎಸ್‌ಐಎಲ್‌) 2018-19ನೇ ಸಾಲಿನಲ್ಲಿ 2000 ಕೋಟಿ ರೂ. ವಹಿವಾಟು ನಡೆಸಿ ದಾಖಲೆ ನಿರ್ಮಿಸಿದೆ. ಪ್ರಸಕ್ತ ಸಾಲಿನಲ್ಲಿ 2200 ಕೋಟಿ ರೂ. ವಹಿವಾಟು ನಡೆಸುವ ಗುರಿ ಹಾಕಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಸಿ.ಗೌರಿಶಂಕರ್‌ ತಿಳಿಸಿದ್ದಾರೆ.

Advertisement

ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪುನರ್‌ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ದೇಶದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಜಾಲ ಹೊಂದಿರುವ ಎಂಎಸ್‌ಐಎಲ್‌, ಪ್ರಧಾನಮಂತ್ರಿ ಜನೌಷಧ ಯೋಜನೆಯಡಿ 74 ಜನೌಷಧ ಕೇಂದ್ರಗಳನ್ನು ತೆರೆದು ಕಡಿಮೆ ಬೆಲೆಯಲ್ಲಿ ಔಷಧ ಮಾರಾಟ ಮಾಡುತ್ತಿದೆ.

ಲೇಖಕ್‌ ಮತ್ತು ವಿದ್ಯಾ ನೋಟ್‌ ಪುಸ್ತಕಗಳ ಮಾರಾಟ ಹಾಗೂ ಇತರೆ ಲೇಖನ ಸಾಮಗ್ರಿಗಳನ್ನು ಸಾರ್ವಜನಿಕ, ಸರ್ಕಾರಿ ಇಲಾಖೆಗಳಿಗೆ ಸರಬರಾಜು ಮಾಡುವ ಮೂಲಕ 83.81 ಕೋಟಿ ರೂ. ವಹಿವಾಟು ನಡೆಸಿದೆ. ಚಿಟ್‌ಫಂಡ್‌ ವಹಿವಾಟಿನಲ್ಲಿ 235 ಕೋಟಿ ರೂ. ಹಾಗೂ 25ಕ್ಕೂ ಹೆಚ್ಚು ಚಿಟ್‌ಫಂಡ್‌ ಶಾಖೆಗಳನ್ನು ಆರಂಭಿಸಿದೆ.

ದೇಶದಲ್ಲೇ ಮೊದಲ ಬಾರಿಗೆ ವಿದೇಶಿ ನದಿ ಮರಳು ಮಾರಾಟ ಪರಿಚಯಿಸಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮರಳು ತಲುಪಿಸಲಿದೆ. ಮದ್ಯ ಮಾರಾಟದಲ್ಲಿ ಉತ್ತಮ ವಹಿವಾಟು ನಡೆಸಿರುವ ಎಂಎಸ್‌ಐಎಲ್‌, 800 ಸಿಎಲ್‌-11ಸಿ ಮಳಿಗೆಗಳನ್ನು ತೆರೆದಿದ್ದು, ಇನ್ನೂ 554 ಸಿಎಲ್‌-11ಸಿ ಸನ್ನದುಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ.

ಸುಮಾರು ಎರಡೂವರೆ ಸಾವಿರ ಯುವಕರಿಗೆ ಉದ್ಯೋಗ ಒದಗಿಸುವ ಜತೆಗೆ ಜನಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಸಿ. ಪ್ರಕಾಶ್‌, ಮುಖ್ಯ ಪ್ರಧಾನ ವ್ಯವಸ್ಥಾಪಕ ಎ.ಎಂ. ಚಂದ್ರಪ್ಪ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next