ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿದ್ದಾರೆ. ಮುಂಬರುವ 2022 ಸಾಲಿನ ಕೂಟದಲ್ಲೂ ಅವರು ಮತ್ತೊಮ್ಮೆ ಸಿಎಸ್ ಕೆ ತಂಡವನ್ನು ಮುನ್ನಡೆಸಲಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಫ್ರಾಂಚೈಸಿಯನ್ನು ಇದುವರೆಗೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಸಿಎಸ್ ಕೆ ಫ್ರಾಂಚೈಸಿಗೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ ಎಂದು ಮಾಜಿ ಸಿಎಸ್ ಕೆ ಆಟಗಾರ ಸುಬ್ರಹ್ಮಣ್ಯಮ್ ಬದ್ರಿನಾಥ್ ಹೇಳಿದ್ದಾರೆ.
ಬದ್ರಿನಾಥ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ಸಿಎಸ್ ಕೆ ಫ್ರಾಂಚೈಸಿಯು ವೀರೆಂದ್ರ ಸೆಹವಾಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿತ್ತು, ಆದರೆ ನಂತರ ಧೋನಿಯ ಆಯ್ಕೆ ನಡೆಯಿತು ಎಂದಿದ್ದಾರೆ.
“2008 ರಲ್ಲಿ ಐಪಿಎಲ್ ಪ್ರಾರಂಭವಾದಾಗ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮೊದಲ ಆಯ್ಕೆ ಯಾರೆಂದು ನೀವು ನೋಡಿದರೆ, ಅದು ವೀರೇಂದ್ರ ಸೆಹವಾಗ್. ಸೆಹವಾಗ್ ಅವರನ್ನು ಆಯ್ಕೆ ಮಾಡಲು ಮ್ಯಾನೇಜ್‌ಮೆಂಟ್ ಖಚಿತವಾಗಿ ನಿರ್ಧರಿಸಿತ್ತು, ಆದರೆ ಸೆಹವಾಗ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಲು ಬಯಸಿದರು” ಎಂದು ಬದ್ರಿನಾಥ್ ಹೇಳಿದರು.
ಇದನ್ನೂ ಓದಿ:ಮಿಯ್ಯಾರು “ಲವ – ಕುಶ” ಜೋಡುಕರೆ ಕಂಬಳ ಕೂಟದ ಫಲಿತಾಂಶ
“2008 ರಲ್ಲಿ ಎಂಎಸ್ ಧೋನಿ ಅತ್ಯಂತ ದುಬಾರಿ ಆಟಗಾರರಾಗಿದ್ದರು, ಅವರನ್ನು 6 ಕೋಟಿ ರೂಪಾಯಿಗಳಿಗೆ ಸಿಎಸ್ ಕೆ ಖರೀದಿಸಿತು” ಎಂದು ಮಾಜಿ ಸಿಎಸ್ ಕೆ ಆಟಗಾರ ಬದ್ರಿನಾಥ್ ಮೆಲುಕು ಹಾಕಿದರು.