ದುಬಾೖ: ಎಂ.ಎಸ್. ಧೋನಿಯೆಂದರೆ ವಿದೇಶೀಯರಿಗೂ ಬಹಳ ಪ್ರೀತಿ. ಪಾಕಿಸ್ಥಾನದಲ್ಲೂ ಅವರಿಗೆ ಬಹಳ ಅಭಿಮಾನಿಗಳಿದ್ದಾರೆ. ಅವರಲ್ಲೆಲ್ಲ ಅಗ್ರಸ್ಥಾನದಲ್ಲಿ ನಿಲ್ಲುವುದು ಬಶೀರ್ ಚಾಚಾ ಅಥವಾ ಚಾಚಾ ಶಿಕಾಗೊ.
ಅವರೀಗ ರವಿವಾರದ ಭಾರತ-ಪಾಕ್ ಪಂದ್ಯಕ್ಕೆ ಆಗಮಿಸಲು ಸಿದ್ಧರಾಗಿದ್ದಾರೆ. ಇದಕ್ಕೆ ಕಾರಣ, ಧೋನಿ ಮೆಂಟರ್ ಆಗಿ ಭಾರತ ತಂಡಕ್ಕೆ ಮರಳಿರುವುದು!
ಮೂಲತಃ ಚಾಚಾ ಪಾಕಿಸ್ಥಾನ ತಂಡದ ಅಭಿಮಾನಿ. ಆದರೆ ಧೋನಿ ವಿಚಾರ ಬಂದಾಗ ಮಾತ್ರ ಬದಲಾಗುತ್ತಾರೆ. ಧೋನಿ ನಿವೃತ್ತರಾದಾಗ ಅವರು ಭಾರತ-ಪಾಕ್ ಪಂದ್ಯ ನೋಡುವುದನ್ನೂ ನಿಲ್ಲಿಸಿದ್ದರು. ಈಗ ಧೋನಿ ಮರಳಿದ್ದಾರೆ. ಹಾಗಾಗಿ ಚಾಚಾ ಕೂಡ ಹಾಜರಾಗಿದ್ದಾರೆ. ಆದರೆ ಅವರಿಗೆ ಇನ್ನೂ ರವಿವಾರದ ಪಂದ್ಯದ ಟಿಕೆಟ್ ಸಿಕ್ಕಿಲ್ಲ. ಇದನ್ನು ಧೋನಿ ಕೊಡಿಸುತ್ತಾರೆಂಬ ಖಚಿತ ವಿಶ್ವಾಸವಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ
2011ರ ಭಾರತ-ಪಾಕಿಸ್ಥಾನ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಧೋನಿಯೇ ಚಾಚಾಗೆ ಟಿಕೆಟ್ ಕೊಡಿಸಿದ್ದರು. 2014ರಲ್ಲಿ ಬಾಂಗ್ಲಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಧೋನಿ ಟಿಕೆಟ್ ಕೊಡಿಸಿದ್ದರು.