Advertisement
ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದ ನಂತರ ಮಾತನಾಡಿದ ಸಂಜಯ್ ಬಂಗಾರ್, ಧೋನಿಗೆ ಮುಂದಿನೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗುವುದು. ಹಾಗಾಗಿ ಅವರ ಜಾಗದಲ್ಲಿ ಬೇರೆ ಯಾರಾದರೂ ಕಣಕ್ಕಿಳಿಯಲಿದ್ದಾರೆ ಎಂದರು. ಬಹುತೇಕ ರಿಷಭ್ ಪಂತ್ ಧೋನಿ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ.
ಆರಂಭಿಕ ಆಟಗಾರ ಶಿಖರ್ ಧವನ್ ರ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಸಂಜಯ್, ಕಳೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಧವನ್ ಎರಡು ಉತ್ತಮ ಇನ್ನಿಂಗ್ಸ್ ಆಡಿದ್ದರು. ಅವರು ನಮ್ಮ ಮುಖ್ಯ ಆಟಗಾರ ಎಂದು ಅಭಿಪ್ರಾಯ ಪಟ್ಟರು.
Related Articles
Advertisement
ಸರಣಿಯ ನಾಲ್ಕನೇ ಪಂದ್ಯ ಮಾರ್ಚ್ 10ರಂದು ಮೊಹಾಲಿಯಲ್ಲಿ ನಡೆಯಲಿದೆ. ಭಾರತ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ ಕೆಲವು ಬದಲಾಣೆ ಕಾಣಬಹುದು. ಶಿಖರ್ ಧವನ್ ಬದಲು ಕೆ.ಎಲ್.ರಾಹುಲ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.