Advertisement

ಜೆರ್ಸಿ ಸಂಖ್ಯೆ 7ರ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹೇಂದ್ರ ಸಿಂಗ್ ಧೋನಿ

03:44 PM Mar 18, 2022 | Team Udayavani |

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಜೆರ್ಸಿ ಸಂಖ್ಯೆ ‘7’ರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಸಿಎಸ್ ಕೆ ತಂಡದಲ್ಲದಾಗಲಿ, ಭಾರತ ತಂಡದಲ್ಲಾಗಲಿ ಮಹೇಂದ್ರ ಸಿಂಗ್ ಧೋನಿಯವರು ಏಳು ಸಂಖ್ಯೆಯ ಜೆರ್ಸಿಯನ್ನೇ ಧರಿಸುತ್ತಾರೆ. ಇದೀಗ ಇದರ ಹಿಂದಿನ ಕಥೆಯನ್ನು ಧೋನಿ ಹೇಳಿಕೊಂಡಿದ್ದಾರೆ.

Advertisement

“ ನಂಬರ್ 7 ನನಗೆ ಅದೃಷ್ಟದ ಸಂಖ್ಯೆ, ಅದಕ್ಕೆ ನಾನು ಜೆರ್ಸಿಯಲ್ಲಿ ಆ ಸಂಖ್ಯೆ ಹೊಂದಿದ್ದೇನೆ ಎಂದು ತುಂಬಾ ಜನರು ತಿಳಿದುಕೊಂಡಿದ್ದಾರೆ. ಆದರೆ ನಾನು ತುಂಬಾ ಸರಳ ಕಾರಣದಿಂದ ಆ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದು. ನಾನು ಜನಿಸಿದ್ದು ವರ್ಷದ ಏಳನೇ ತಿಂಗಳಿನ ಏಳನೇ ತಾರೀಕಿನಂದು. (ಜುಲೈ 7) ಹೀಗಾಗಿ ಏಳು ಸಂಖ್ಯೆಯನ್ನು ಜೆರ್ಸಿಯಲ್ಲಿ ಹಾಕಿದ್ದೇನೆ ಅಷ್ಟೇ” ಎಂದು ಹೇಳುತ್ತಾರೆ ಮಹೇಂದ್ರ ಸಿಂಗ್ ಧೋನಿ.

“ಇದು ತಟಸ್ಥ ಸಂಖ್ಯೆ. ಇದರಿಂದ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಹಲವರು ಹೇಳಿದ್ದರು. ಆದರೆ ನನಗೆ ಇಂತಹ ನಂಬಿಕೆಗಳಿಲ್ಲ. ನಂಬರ್ 7 ಎನ್ನುವುದು ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ” ಎಂದು ಸಿಎಸ್ ಕ ಯ್ಯುಟ್ಯೂಬ್ ಚಾನೆಲ್ ಗೆ ಮಾತನಾಡಿದ ಧೋನಿ ಹೇಳಿದರು.

ಇದನ್ನೂ ಓದಿ:ಪಾಕಿಸ್ತಾನ ಹಾರಿಸಿದ ಕ್ಷಿಪಣಿ ಗುರಿ ಮುಟ್ಟದೇ ಸಮೀಪದಲ್ಲೇ ಪತನ, ಅಲ್ಲಗಳೆದ ಪಾಕ್!

ಐಪಿಎಲ್ 2022ರ ಮೊದಲ ಪಂದ್ಯ ಚೆನ್ನೈ ಮತ್ತು ಕೆಕೆಆರ್ ನಡುವೆ ನಡೆಯಲಿದೆ. ಮಾರ್ಚ್ 26ರಂದು ಮುಂಬೈನ ವಾಂಖೆಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.

Advertisement

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾ), ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡೆವೊನ್ ಕಾನ್ವೇ, ಸುಭ್ರಾಂಶು ಸೇನಾಪತಿ, ಹರಿ ನಿಶಾಂತ್, ಎನ್ ಜಗದೀಸನ್, ದೀಪಕ್ ಚಾಹರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಡ್ವೇನ್ ಬ್ರಾವೋ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ.

Advertisement

Udayavani is now on Telegram. Click here to join our channel and stay updated with the latest news.

Next