Advertisement
ಉತ್ತಮ ಆರಂಭ ಪಡೆದಿದ್ದ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲಿ ರನ್ ಕಲೆ ಹಾಕಲು ಪರದಾಡಿತು. ಸಿಎಸ್ ಕೆ ಬೌಲರ್ ಡ್ವೇನ್ ಬ್ರಾವೋ ಉತ್ತಮ ಬೌಲಿಂಗ್ ಮಾಡಿ ಆರ್ ಸಿಬಿ ಬ್ಯಾಟರ್ ಗಳನ್ನು ಕಟ್ಟಿ ಹಾಕಿದರು.
Related Articles
Advertisement
“ಬ್ರಾವೋ ತನ್ನ ಸ್ಲೋವರ್ ಬಾಲ್ ಗಳಿಂದಲೇ ಪ್ರಸಿದ್ಧ. ಬ್ಯಾಟ್ಸಮನ್ ಕೂಡಾ ಅದನ್ನೇ ನಿರೀಕ್ಷೆ ಮಾಡುತ್ತಾನೆ. ಹೀಗಾಗಿ ಬೇರೆ ಬೇರೆ ಎಸೆತಗಳನ್ನು ಹಾಕುವಂತೆ ನಾನು ಹೇಳಿದೆ. ಲೆಂತ್ ಬಾಲ್, ಯಾರ್ಕರ್ ಹೀಗೆ, ಹೀಗಾಗಿ ಬ್ರಾವೋ ಸ್ಲೋವರ್ ಬಾಲ್ ಹಾಕುದಿಲ್ಲ ಎಂದು ಬ್ಯಾಟ್ಸಮನ್ ಯೋಚನೆ ಮಾಡುತ್ತಾನೆ” ಎಂದು ಧೋನಿ ಹೇಳಿದರು.
ಟಿ20 ಮಾದರಿಯಲ್ಲಿ ಬ್ರಾವೋ ಅದ್ಭುತ ಆಟಗಾರ. ಟಿ20 ಮಾದರಿ ಕ್ರಿಕೆಟ್ ನ್ನು ಆತ ವಿಶ್ವದೆಲ್ಲೆಡೆ ಆಡಿದ್ದಾನೆ. ತಂಡ ಯಾವಾಗ ಬಯಸುತ್ತದೆಯೋ ಆಗ ಬ್ರಾವೋ ಜವಾಬ್ದಾರಿ ಹೊರುತ್ತಾನೆ ಎಂದು ಸಿಎಸ್ ಕೆ ನಾಯಕ ಧೋನಿ ಹೇಳಿದರು.
ಆರ್ ಸಿಬಿ ವಿರುದ್ಧ ನಾಲ್ಕು ಓವರ್ ಬಾಲ್ ಹಾಕಿದ್ದ ಬ್ರಾವೋ ಕೇವಲ 24 ರನ್ ನೀಡಿ ಮೂರು ವಿಕೆಟ್ ಕಿತ್ತರು. 200 ರನ್ ನತ್ತ ಗುರಿ ಇಟ್ಟಿದ್ದ ಆರ್ ಸಿಬಿಯನ್ನು ಕೇವಲ 156 ರನ್ ಗೆ ಕಟ್ಟಿ ಹಾಕುವಲ್ಲಿ ಬ್ರಾವೋ ಪ್ರಮುಖ ಪಾತ್ರ ವಹಿಸಿದರು.