Advertisement
ಧೋನಿ ಈ ವರ್ಷದ ಆರಂಭದಲ್ಲಿ ನಾಯಕತ್ವಕ್ಕೆ ವಿದಾಯ ಹೇಳಿದ್ದರು.ಆದ್ದರಿಂದ ಅವರು ಕ್ರಿಕೆಟ್‌ಗೂ ವಿದಾಯ ಹೇಳಬಹುದೆನ್ನುವ ನಿರೀಕ್ಷೆಯಿದೆ. ಭಾರತದ ವೇಳಾಪಟ್ಟಿ ಬಹಳ ಬಿಗುವಾಗಿದೆ. ಆದ್ದರಿಂದ ಶೇ.100 ಆಡಿಯೇ ಆಡುತ್ತೇನೆಂದು ಹೇಳಲಾಗುವುದಿಲ್ಲ. ಆದರೆ 2019ಕ್ಕೆ ಇನ್ನಿರುವುದು ಕೇವಲ 2 ವರ್ಷ. ಅಷ್ಟರಲ್ಲಿ ಏನು ಬೇಕಾದರೂ ಆಗಬಹುದು. ಸದ್ಯದ ಮಟ್ಟಿಗೆ ನೋಡುವುದಾದರೆ ನಾನು ಸಲೀಸಾಗಿ 2019ರ ನಂತರವೂ ನನ್ನ ಆಟ ಮುಂದುವರಿಸಬಲ್ಲೆ ಎಂದು ಧೋನಿ ಹೇಳಿದ್ದಾರೆ. ಆದರೆ ಧೋನಿ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಪ್ರಕಾರ, ಜೂನ್ ತಿಂಗಳಲ್ಲಿ ಇಂಗ್ಲೆಂಡ್ನಲ್ಲಿನಡೆಯಲಿರುವ ಚಾಂಪಿಯನ್ಸ್ ಟ್ರೋμ ಧೋನಿ ಪಾಲಿಗೆ ನಿರ್ಣಾಯಕ. ಅಲ್ಲಿ ಅವರ ಪ್ರದರ್ಶನದ ಆಧಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ