Advertisement

12.17 ಕೋಟಿ ರೂ. ತೆರಿಗೆ ಪಾವತಿಸಿದ ಧೋನಿ

06:00 AM Jul 25, 2018 | |

ರಾಂಚಿ: ದೇಶದ ಶ್ರೀಮಂತರಲ್ಲಿ ಕೆಲವರು ತೆರಿಗೆ ಪಾವತಿಸದೆ ಸರ‌ಕಾರಕ್ಕೆ ವಂಚಿಸಲು ಪ್ರಯತ್ನಿಸಿದ ಪ್ರಕರಣವನ್ನು ಕಾಣುತ್ತಲೇ ಇದ್ದೇವೆ. ಆದರೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಶಿಸ್ತಿನ ಸಿಪಾಯಿ ಎನ್ನುವುದನ್ನು ಸಾರಿ ಹೇಳಿದ್ದಾರೆ. 2017-18ರಲ್ಲಿ ಒಟ್ಟಾರೆ 12.17 ಕೋಟಿ ರೂ. ತೆರಿಗೆ ಪಾವತಿಸಿ ಮಾದರಿ ಪ್ರಜೆ ಎನಿಸಿಕೊಂಡಿದ್ದಾರೆ. ಜಾರ್ಖಂಡ್‌ ಮತ್ತು ಬಿಹಾರ ವ್ಯಾಪ್ತಿಯಲ್ಲಿ ಅತ್ಯಧಿಕ ತೆರಿಗೆ ಪಾವತಿಸಿದವರ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ.

Advertisement

2016-17ರಲ್ಲಿ ಧೋನಿ ಒಟ್ಟಾರೆ 1.24 ಕೋಟಿ ರೂ. ತೆರಿಗೆ ಪಾವತಿಸಿದ್ದರು. ಆ ವರ್ಷದ ಫೋಬ್ಸ್ì ಪಟ್ಟಿಯಲ್ಲಿ ಧೋನಿ ದೇಶದಲ್ಲಿ 3ನೇ ಅತ್ಯಧಿಕ ಗಳಿಕೆ ಹೊಂದಿರುವ ಕ್ರೀಡಾಪಟು ಎನಿಸಿದ್ದರು. ಈ ಪಟ್ಟಿಯ ಮೊದಲೆರಡು ಸ್ಥಾನಗಳ‌ಲ್ಲಿ ಕೊಹ್ಲಿ, ಸಚಿನ್‌ ತೆಂಡುಲ್ಕರ್‌ ಇದ್ದರು. 2017ರಲ್ಲಿ ಧೋನಿ ವಿವಿಧ ಒಡಂಬಡಿಕೆಗಳಿಂದ ಒಟ್ಟು 63.7 ಕೋಟಿ ರೂ. ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next