ಚೆನ್ನೈ: ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಕಾರಣ ಇದೇ ತಿಂಗಳು ಅಂತ್ಯದಲ್ಲಿ ಆರಂಭವಾಗಬೇಕಿದ್ದ ಐಪಿಎಲ್ ಕೂಟವನ್ನು ಮುಂದೂಡಲಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸ ಮೊಟಕುಗೊಳಿಸಿ ನಡೆದಿದ್ದಾರೆ.
ಈ ವರ್ಷ ಐಪಿಎಲ್ ನಡೆಯುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಕೊರೊನಾ ಭಿತಿಯಿಂದಾಗಿ ಎಪ್ರಿಲ್ 15ರವರೆಗೆ ಮುಂದೂಡಲಾಗಿದೆ.
ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದ್ದ ಆಟಗಾರರು ತಮ್ಮ ಮನೆಗಳಿಗೆ ನಡೆದಿದ್ಧಾರೆ. ಅದರಂತೆ ಧೋನಿ ಕೂಡಾ ಚಿಪಾಕ್ ಅಂಗಳ ತೊರೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅಲ್ಪ ಕಾಲದ ವಿದಾಯ ಎಂದಿದೆ.
Related Articles
ಚಿಪಾಕ್ ಅಂಗಳದಲ್ಲಿ ಇತ್ತೀಚೆಗಷ್ಟೇ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಈ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಧೋನಿ ಭಾರತ ತಂಡಕ್ಕೆ ಮರು ಆಯ್ಕೆಯಾಗಬಹುದು ಎಂದಿ ಬಿಸಿಸಿಐ ಮೂಲಗಳು ತಿಳಿಸಿದ್ದವು.