Advertisement

ಎಂಎಸ್‌ ಧೋನಿ ಶ್ರೇಷ್ಠ ವಿಕೆಟ್‌ಕೀಪರ್‌: ಪ್ರಸಾದ್‌

12:10 PM May 09, 2017 | Harsha Rao |

ಹೊಸದಿಲ್ಲಿ: ಸದ್ಯ ಮಹೇಂದ್ರ ಸಿಂಗ್‌ ಧೋನಿ ಅವರು ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್‌ ಎಂದು ಹೇಳುವ ಮೂಲಕ ಆಯ್ಕೆ ಸಮಿತಿಯ ಚೇರ್ಮನ್‌ ಎಂಎಸ್‌ಕೆ ಪ್ರಸಾದ್‌ ಅವರು ಧೋನಿ ಭವಿಷ್ಯದ ಬಗ್ಗೆ ಎದ್ದಿರುವ ಸಂಶಯವನ್ನು ದೂರ ಮಾಡಿದ್ದಾರೆ. 

Advertisement

ಏಕದಿನ ಕ್ರಿಕೆಟ್‌ಗೆ 35ರ ಹರೆಯದ ಧೋನಿ ಅವರ ಉತ್ತರಾಧಿಕಾರಿಯಾಗಿ 19ರ ಹರೆಯದ ರಿಷಬ್‌ ಪಂತ್‌ ಬಹಳಷ್ಟು ಸುದ್ದಿ ಮಾಡುತ್ತಿದ್ದರೂ ಧೋನಿ ಸದ್ಯ ಶ್ರೇಷ್ಠ ವಿಕೆಟ್‌ಕೀಪರ್‌ ಆಗಿದ್ದಾರೆ. ಅವರ ನಿವೃತ್ತಿಯ ಬಳಿಕವಷ್ಟೇ ಪಂತ್‌ ಅವರ ಆಯ್ಕೆಯನ್ನು ಚರ್ಚಿಸಬಹುದು. ಪಂತ್‌ ಭವಿಷ್ಯದ ವಿಕೆಟ್‌ಕೀಪರ್‌ ಆಗಿ ಬೆಳೆಯುತ್ತಿದ್ದಾರೆ ಎಂದು ಪ್ರಸಾದ್‌ ತಿಳಿಸಿದ್ದಾರೆ.

ಧೋನಿ ಅವರ ಕಳಪೆ ಬ್ಯಾಟಿಂಗ್‌ ಫಾರ್ಮ್ನಿಂದ ಕಳವಳಗೊಂಡಿದ್ದೀರಾ ಎಂಬ ಪ್ರಶ್ನೆಗೆ ಆಯ್ಕೆ ಸಮಿತಿ ಇನ್ನೂ ಧೋನಿ ಅವರಲ್ಲಿ ನಂಬಿಕೆ ಇರಿಸಿಕೊಂಡಿದೆ. ನಾವೆಲ್ಲ ಧೋನಿ ಅವರು ವಿಶ್ವದ ಶ್ರೇಷ್ಠ ವಿಕೆಟ್‌ಕೀಪರ್‌ ಎಂದು ನಂಬಿದ್ದೇವೆ. ಅವರ ಬ್ಯಾಟಿಂಗ್‌ ಫಾರ್ಮ್ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ ಎಂದು ಪ್ರಸಾದ್‌ ಹೇಳಿದರು.

ಅವರೊಬ್ಬ ತಂಡದ ಉಪಯುಕ್ತ ಆಸ್ತಿ ಮತ್ತು ನಿರ್ಣಾಯಕ ಪರಿಸ್ಥಿತಿಯಲ್ಲಿ ಅವರ ಸಲಹೆ, ಸೂಚನೆಗಳು ಪರಿಣಾಮಕಾರಿ. ಅವರ ಮೆದುಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ವಿರಾಟ್‌ ಅವರಿಗೆ ಮಾರ್ಗದರ್ಶನ ನೀಡಲು ಧೋನಿ ಸೂಕ್ತ ವ್ಯಕ್ತಿ ಎಂದು ಪ್ರಸಾದ್‌ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next