Advertisement

Dhoni ಬಳಿ ಎಷ್ಟು ಬೈಕ್ ಗಳಿವೆ ಗೊತ್ತಾ? ಫಾರ್ಮ್ ಹೌಸ್ ನೋಡಿ ಅಚ್ಚರಿಪಟ್ಟ ವೆಂಕಟೇಶ್ ಪ್ರಸಾದ್

03:08 PM Jul 18, 2023 | Team Udayavani |

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬೈಕ್ ಪ್ರೀತಿಯ ವಿಚಾರ ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಧೋನಿ ಅವರು ತಮ್ಮ ಬೈಕ್ ಗಳನ್ನು ಇರಿಸಲು ದೊಡ್ಡ ಕಟ್ಟಡವನ್ನೇ ಹೊಂದಿರುವ ವಿಚಾರವೂ ಅವರ ಈ ಹಿಂದಿನ ಪೋಸ್ಟ್ ಒಂದರಿಂದ ಬಯಲಾಗಿತ್ತು. ಆದರೆ ಅದರ ಒಳಗೆ ಹೇಗಿದೆ? ಎಷ್ಟು ಬೈಕ್ ಗಳಿವೆ ಎನ್ನವುದು ಮಾತ್ರ ತಿಳಿದಿರಲಿಲ್ಲ. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ.

Advertisement

ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಇತ್ತೀಚೆಗೆ ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ಧೋನಿಯವರ ಬೈಕ್ ಕಲೆಕ್ಷನ್ ನೋಡಿ ಅಚ್ಚರಿ ಪಟ್ಟಿದ್ದಾರೆ. ಧೋನಿ ಮನೆಯಲ್ಲಿ ಕೇವಲ ಒಂದೆರಡಲ್ಲ ನೂರಕ್ಕೂ ಹೆಚ್ಚು ಬೈಕ್ ಗಳಿವೆ. ಇದರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮೊದಲು ಧೋನಿ ಪತ್ನಿ ಸಾಕ್ಷಿ ಮಾತನಾಡುವುದು ಕೇಳುತ್ತದೆ. “ಮೊದಲ ಬಾರಿಗೆ ರಾಂಚಿಗೆ ಬಂದು ಹೇಗನಿಸುತ್ತದೆ” ಎನ್ನುತ್ತಾರೆ. ಅದಕ್ಕೆ ವೆಂಕಟೇಶ್ ಅವರು, ‘ಇದು ಮೊದಲ ಬಾರಿ ಏನಲ್ಲ, ನಾಲ್ಕೈದು ಬಾರಿ ಬಂದಿದ್ದೇನೆ. ಆದರೆ ಈ ಜಾಗ ಅದ್ಭುತವಾಗಿದೆ’ ಎಂದರು.

ಇದನ್ನೂ ಓದಿ:Dandeli: ಜೈನಮುನಿಗಳಿಗೆ ಸೂಕ್ತ ರಕ್ಷಣೆ ಕೊಡುವಂತೆ ಆಗ್ರಹಿಸಿ ಜೈನ ಸಮಾಜದಿಂದ ಸಿ.ಎಂ.ಗೆ ಮನವಿ

“ಇಂತ ಏನನ್ನಾದರೂ ಹೊಂದಲು ಯಾರಾದರೂ ತುಂಬಾ ಆಸಕ್ತಿ ಹೊಂದಿರಬೇಕು, ನಾನು ನಿಮಗೆ ಹೇಳುತ್ತಿದ್ದೇನೆ. ಯಾರಾದರೂ ಈ ಬಗ್ಗೆ ಹುಚ್ಚರಾಗದ ಹೊರತು, ಇಷ್ಟು ಬೈಕ್‌ಗಳನ್ನು ಹೊಂದಲು ಸಾಧ್ಯವಿಲ್ಲ” ಎಂದು ಪ್ರಸಾದ್ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಾಕ್ಷಿ’ ಇದು ಹುಚ್ಚತನವೇ’ ಎಂದರು.

Advertisement

ಇದೇ ವೇಳೆ ಸಾಕ್ಷಿ” ಯಾಕೆ ಮಾಹಿ? ಇದರ ಅಗತ್ಯ ಏನಿದೆ?” ಎಂದು ಪ್ರಶ್ನಿಸಿದರು, ಅದಕ್ಕೆ ಉತ್ತರಿಸಿದ ಧೋನಿ, “ಯಾಕೆಂದರೆ ನೀವು ಎಲ್ಲವನ್ನೂ ನನ್ನಿಂದ ಪಡೆದುಕೊಂಡಿರಿ, ನನಗೆ ನನ್ನದೇ ಆದದ್ದನ್ನು ಹೊಂದುವ ಅಗತ್ಯವಿತ್ತು. ಇದಕ್ಕೆ ಮಾತ್ರ ನೀವು ಅನುಮತಿ ನೀಡಿದ್ದು” ಎಂದು ನಗುತ್ತಲೇ ಹಳಿದರು.

ಧೋನಿ ಯಾವ ತಯಾರಕರ ಎಷ್ಟು ಬೈಕ್‌ ಗಳನ್ನು ಹೊಂದಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, ರಾಜದೂತ್, ಕವಾಸಕಿ ನಿಂಜಾ, ಹಾರ್ಲೆ ಡೇವಿಡ್‌ಸನ್, ಟಿವಿಎಸ್ ರೋನಿನ್‌ ಗಳಿವೆ.

ವಿಡಿಯೋ ನೋಡಿ

Advertisement

Udayavani is now on Telegram. Click here to join our channel and stay updated with the latest news.

Next