Advertisement

ಈ ಬಾರಿ ಐಪಿಎಲ್‌ “ಬೆಸ್ಟ್‌ ಇಲೆವೆನ್‌’ನಲ್ಲಿ ಧೋನಿ, ಎಬಿಡಿ, ಗೇಲ್‌ ಇಲ್ಲ! ಕಾರಣ ಇಷ್ಟೇ…

03:32 PM Sep 18, 2020 | mahesh |

ದುಬಾೖ: ಐಪಿಎಲ್‌ “ಬೆಸ್ಟ್‌ ಇಲೆವೆನ್‌’ನಲ್ಲಿ ಸ್ಟಾರ್‌ ಆಟಗಾರರಾದ ಧೋನಿ, ಎಬಿಡಿ, ಕ್ರಿಸ್‌ ಗೇಲ್‌ ಅವರಿಗೇ ಜಾಗವಿಲ್ಲವೆಂದರೆ ಅಭಿಮಾನಿಗಳು ಅಚ್ಚರಿಗೆ ಬೀಳಬಹುದು ಅಥವಾ ಆಕ್ರೋಶಕ್ಕೆ ಒಳಗಾಗಲೂಬಹುದು! ಆಸ್ಟ್ರೇಲಿಯದ ಮಾಜಿ ಆಟಗಾರ ಬ್ರಾಡ್‌ ಹಾಗ್‌ ರಚಿಸಿದ ಈ ವರ್ಷದ ಶ್ರೇಷ್ಠ ಐಪಿಎಲ್‌ ತಂಡವೊಂದನ್ನು ಕಂಡಾಗ ಇಂಥದೇ ಅನುಭವವಾಗುತ್ತದೆ.

Advertisement

ಇದರಲ್ಲಿ ಮೇಲಿನ ಮೂವರೂ ಆಟಗಾರರಿಲ್ಲ. ಬ್ರಾಡ್‌ ಹಾಗ್‌ ರಚಿಸಿದ ತಂಡದ ನಾಯಕ ಕೇನ್‌ ವಿಲಿಯಮ್ಸನ್‌. ವಿಕೆಟ್‌ ಕೀಪರ್‌ ಆಗಿ ಕಾಣಿಸಿಕೊಂಡವರು ರಿಷಭ್‌ ಪಂತ್‌. ರೋಹಿತ್‌ ಶರ್ಮ ಮತ್ತು ಡೇವಿಡ್‌ ವಾರ್ನರ್‌ ಈ ತಂಡದ ಆರಂಭಿಕರು. ವನ್‌ಡೌನ್‌ನಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ. ಬಳಿಕ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಕೀಪರ್‌ ರಿಷಭ್‌ ಪಂತ್‌. ತಂಡದ ಮೂವರು ಆಲ್‌ರೌಂಡರ್‌ಗಳೆಂದರೆ ಆ್ಯಂಡ್ರೆ ರಸೆಲ್‌, ಸುನೀಲ್‌ ನಾರಾಯಣ್‌ ಮತ್ತು ರವೀಂದ್ರ ಜಡೇಜ. ಮೂವರು ಸ್ಪೆಷಲಿಸ್ಟ್‌ ಬೌಲರ್‌ಗಳು ಭಾರತದವರೇ ಆಗಿರುವುದು ವಿಶೇಷ. ಇವರೆಂದರೆ ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌ ಮತ್ತು ಜಸ್‌ಪ್ರೀತ್‌ ಬುಮ್ರಾ.

“ನಾನಿಲ್ಲಿ ಧೋನಿ, ಎಬಿಡಿ ಅಥವಾ ಗೇಲ್‌ ಅವರನ್ನು ಆಯ್ಕೆ ಮಾಡಿಲ್ಲ. ಅವರು ಹಳಬರು ಎಂಬುದೇ ಇದಕ್ಕೆ ಕಾರಣ. ಆದರೆ ಪಂದ್ಯದ ಗತಿಯನ್ನು ಬದಲಿಸಬಲ್ಲ ಈ ಮೂವರು ಕೂಟದ ಬಳಿಕ ನಾನು ರಚಿಸುವ ತಂಡದಲ್ಲಿ ಅವಕಾಶ ಪಡೆಯಲೂಬಹುದು’ ಎಂಬುದಾಗಿ ಬ್ರಾಡ್‌ ಹಾಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next