Advertisement

ಮೃಷ್ಠಾನ್ನ ಉಂಡು ಮೊಸರು ಹುಳಿ ಅಂದ್ರೆ ಹೇಗೆ?

03:45 AM Feb 03, 2017 | |

ಬೆಂಗಳೂರು: ಕಾಂಗ್ರೆಸ್‌ ಬಗ್ಗೆ ಅಸಮಾಧಾನ ಹೊಂದಿ ಹಾಕಿ ಪಕ್ಷಕ್ಕೆ ವಿದಾಯ ಹೇಳಿರುವ ಎಸ್‌. ಎಂ. ಕೃಷ್ಣ ಅವರ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಅವರು ಹಿರಿಯ ನಾಯಕರು. ಅವರ ಬಗ್ಗೆ ನಮಗೆಲ್ಲರಿಗೂ ವಿಶೇಷ ಗೌರವವಿದೆ. ಪಕ್ಷದಲ್ಲಿ ಎಲ್ಲ ರೀತಿಯ ಅಧಿಕಾರ ಅನುಭವಿಸಿ, ಪಾಯಸ, ಹೋಳಿಗೆ ತುಪ್ಪ, ಕಾಳು ಪಲ್ಯ ಸೇರಿ ಮೃಷ್ಠಾನ್ನ ಊಟ ಮಾಡಿ ಕೊನೆಗೆ ಮೊಸರು ಹುಳಿಯಾಗಿದೆ ಅಂತ ಹೇಳಿ, ಊಟಾನೆ ಸರಿಯಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಮಾಜಿ ಸಿಎಂ ಎಚ್‌.ಡಿ. 
ಕುಮಾರಸ್ವಾಮಿ ಈ ವರ್ಷವೇ ವಿಧಾನಸಭೆಗೆ ಚುನಾವಣೆ ನಡೆಯುತ್ತದೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಅವಧಿಗೆ ಮುಂಚೆ ಚುನಾವಣೆ ನಡೆಯುವುದಿಲ್ಲ. 2018 ಏಪ್ರಿಲ್‌ನಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಹೇಳಿದರು.

ನಂಜನಗೂಡು ಉಪ ಚುನಾವಣೆ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಮುಖಂಡರು ತೀರ್ಮಾನ
ಮಾಡುತ್ತಾರೆ. ಕಳಲೆ ಕೇಶವ ಮೂರ್ತಿ ಪಕ್ಷಕ್ಕೆ ಬರುವ ಕುರಿತು ಚರ್ಚೆಯಾಗಿದ್ದು, ಚುನಾವಣೆ ಘೋಷಣೆಯಾದ ಮೇಲೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ಹೇಳಿದರು. ಜೆಡಿಎಸ್‌ ಅತೃಪ್ತ ಶಾಸಕರು ಪಕ್ಷಕ್ಕೆ ಬರುವ ಕುರಿತು ನನ್ನೊಂದಿಗೆ ಯಾರೂ ಮಾತನಾಡಿಲ್ಲ. ಜಮೀರ್‌ ಅಹಮದ್‌ ಮತ್ತು ಅಖಂಡ ಶ್ರೀನಿವಾಸಮೂರ್ತಿ ನನ್ನ ಪಕ್ಕದ ಕ್ಷೇತ್ರದ ಶಾಸಕರು, ಚೆಲುವರಾಯಸ್ವಾಮಿ ಕೂಡ ಆತ್ಮೀಯ ಸ್ನೇಹಿತ. ಆದರೆ, ಪಕ್ಷಕ್ಕೆ ಬರುವ ವಿಷಯದಲ್ಲಿ ಯಾರೂ ನನ್ನೊಂದಿಗೆ ಮಾತುಕತೆ ನಡೆಸಿಲ್ಲ ಎಂದರು. ಕೃಷ್ಣ ಮತ್ತು ಕಾಂಗ್ರೆಸ್‌ ಪ್ರತ್ಯೇಕಿಸಿ ನೋಡುವುದು ಅಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಕಾಂಗ್ರೆಸ್ಸಿಗರನ್ನು ಕಡೆಗಣಿಸಿಲ್ಲ. ಕೃಷ್ಣ ಅವರ ಈ ನಿರ್ಧಾರ ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆ.
ಟಿ.ಬಿ.ಜಯಚಂದ್ರ, ಕಾನೂನು ಸಚಿವ

ಕೃಷ್ಣ ಅವರಿಗೆ ಕಾಂಗ್ರೆಸ್‌ ಎಲ್ಲ ರೀತಿಯ ಸ್ಥಾನಮಾನ ನೀಡಿ ಗೌರವಯುತವಾಗಿ ನಡೆಸಿಕೊಂಡಿದೆ. ಆದರೆ, ಈಗ ಪಕ್ಷದಲ್ಲಿ ತಮ್ಮ ಮಾತಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಪಕ್ಷದ ಹಿರಿಯರು ಅವರ ಮನವೊಲಿಸುವ ಕಾರ್ಯದಲ್ಲಿದ್ದಾರೆ. 
ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ಕೃಷ್ಣ ತಾವು ಕಾಂಗ್ರೆಸ್‌ ಮಾತ್ರ ಬಿಡುತ್ತಿದ್ದೇನೆ. ಆದರೆ ರಾಜಕಾರಣವನ್ನು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಮುಂದೆ ಏನಾಗುತ್ತದೋ ಕಾದು ನೋಡಬೇಕಷ್ಟೇ. 

Advertisement

ಎಚ್‌.ವಿಶ್ವನಾಥ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next