Advertisement

ಮಿಸಸ್‌ ನೈನಾ!

10:45 AM Jul 05, 2017 | Team Udayavani |

ಶುಕ್ರವಾರ ಬಿಡುಗಡೆಯಾಗುತ್ತಿರುವ “ಕೋಲಾರ’, ಆ ಚಿತ್ರದ ನಾಯಕ ಮತ್ತು ನಾಯಕಿಗೆ ಸಖತ್‌ ಲಕ್ಕಿಯಂತೆ. ಅದಕ್ಕೆ ಕಾರಣವೇನೆಂದರೆ, ನಾಯಕ ಯೋಗಿ ನವೆಂಬರ್‌ನಲ್ಲಿ ಮದುವೆಯಾಗುತ್ತಿದ್ದರೆ, ನಾಯಕಿ ನೈನಾ ಈಗಾಗಲೇ ಸದ್ದಿಲ್ಲದೆ ಮದುವೆಯಾಗಿದ್ದಾರೆ. ಸೋಮವಾರ ರಾತ್ರಿ ನಡೆದ “ಕೋಲಾರ’ ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದೆ ನೈನಾ ಈ ವಿಷಯವನ್ನು ಸ್ವತಃ ಸ್ಪಷ್ಟಪಡಿಸಿದ್ದಾರೆ.

Advertisement

ನೈನಾ ಕೈಹಿಡಿದಿರುವುದು ರಾಹುಲ್‌ ಗೌಡ ಅವರನ್ನು. ಈ ಹಿಂದೆ ರಾಹುಲ್‌, ಶ್ರೀನಗರ ಕಿಟ್ಟಿ ಅಭಿನಯದ “ಏ ರಾಮ್‌’ ಎಂಬ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದರು. ಆ ಚಿತ್ರಕ್ಕೆ ನೈನಾ ನಾಯಕಿಯಾಗಿದ್ದರು. ಈಗ ನೈನಾ ಮತ್ತು ರಾಹುಲ್‌ ಮದುವೆಯಾಗಿದ್ದಾರೆ. ಹಾಗಂತ ಇದು ಲವ್‌ ಮ್ಯಾರೇಜ್‌ ಎಂದುಕೊಳ್ಳಬೇಡಿ. ಇದು ಎರಡೂ ಮನೆಯವರು ಒಪ್ಪಿ ಮಾಡಿಸಿದ ಮದುವೆಯಂತೆ.

“ನಾನು ಮದುವೆಯಾಗಬಹುದು ಎಂದು ಕಳೆದ ವರ್ಷವೂ ಅಂದುಕೊಂಡಿರಲಿಲ್ಲ. ಆ ಚಿತ್ರದಲ್ಲಿ ನಟಿಸುವಾಗ ನಮ್ಮ ಮನೆಯವರೇ ಮುಂದೆ ನಿಂತು ಮದುವೆ ಮಾಡಿಸಿದರು. ನಮ್ಮ ತಂದೆ ಜಾತ್ಯಾತೀತ ಮನೋಭಾವದವರು. ನಾನು ಸಿನಿಮಾಗೆ ಬರುವುದಕ್ಕೂ ಅವರೇ ಕಾರಣ, ಹಿಂದೂ ಹುಡುಗನನ್ನು ಮದುವೆಯಾಗೋಕೂ ಅವರೇ ಕಾರಣ. ಮದುವೆ ಹಿಂದು, ಮುಸ್ಲಿಂ ಎರಡೂ ಸಂಪ್ರದಾಯಗಳಲ್ಲಿ ನಡೆಯಿತು. ಈಗ ನಾನು ನೈನಾ ಗೌಡ’ ಎನ್ನುತ್ತಾರೆ ಅವರು.

ಮದುವೆಯಾದ ನಂತರವೂ ಅವಕಾಶ ಸಿಕ್ಕರೆ ನಟನೆಯನ್ನು ಮುಂದುವರೆಸುತ್ತಾರಂತೆ ಅವರು. “ಮನೆಯಲ್ಲಿ ಸಪೋರ್ಟ್‌ ಇರುವುದರಿಂದ, ಒಳ್ಳೆಯ ಅವಕಾಶ ಬಂದರೆ ನಟಿಸುತ್ತೀನಿ. ಸದ್ಯಕ್ಕೆ ನಮ್ಮ ಯಜಮಾನರ ಪ್ರೈಮರಾ ಡೆವಲಪರ್ಸ್‌ನಲ್ಲಿ ಎಂ.ಡಿ ಆಗಿಯೂ ಕೆಲಸ ಮಾಡುತ್ತಿದ್ದೀನಿ’ ಎನ್ನುತ್ತಾರೆ ನೈನಾ.

Advertisement

Udayavani is now on Telegram. Click here to join our channel and stay updated with the latest news.

Next