Advertisement

ದುಬಾೖಯಲ್ಲಿ “ಧ್ವನಿ’ಸಿದ ಮೃಚ್ಛಕಟಿಕಾ 

12:30 AM Mar 15, 2019 | Team Udayavani |

“ಮೃಚ್ಛಕಟಿಕಾ’ ನಾಟಕ ಇಂದು ನಿನ್ನೆಯದಲ್ಲ. ನಾಲ್ಕನೇ ಶತಮಾನದಲ್ಲಿ ಶೂದ್ರಕ ಮಹಾಕವಿ ಬರೆದ ಈ ನಾಟಕ ಭಾರತದ ಎಲ್ಲಾ ಭಾಷೆಗಳಿಗೆ ಅಲ್ಲದೆ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿದೆ. ಈ ನಾಟಕದ ಕಥಾವಸ್ತು ಇಂದಿಗೂ ಪ್ರಸ್ತುತ.ಕನ್ನಡಕ್ಕೆ ಸಾಹಿತಿ ಎಲ್‌. ಲಕ್ಷ್ಮೀ ನಾರಾಯಣ ಭಟ್ಟರು ಅನುವಾದಿಸಿದ್ದು, ಕರ್ನಾಟಕದ ರಂಗಭೂಮಿಯಲ್ಲಿ ಅಚ್ಚಳಿದ ಪ್ರಭಾವ ಬೀರಿದೆ. ಇತ್ತೀಚೆಗೆ ದುಬಾೖಯಲ್ಲಿ “ಧ್ವನಿ ಪ್ರತಿಷ್ಠಾನ’ದ ರಂಗಸಿರಿ ಪ್ರಶಸ್ತಿ ಕಾರ್ಯಕ್ರಮದಂದು ಸ್ಥಳೀಯ ಕಲಾವಿದರು ಪ್ರಕಾಶ್‌ ರಾವ್‌ ಪೈಯಾರ್‌ ಅವರ ನಿರ್ದೇಶನದಲ್ಲಿ ಮೃತ್ಛಕಟಿಕಾದ ಯಶಸ್ವಿ ಪ್ರದರ್ಶನ ನೀಡಿದರು.

Advertisement

ರಾಜನ ಮೈದುನನೆಂಬ ಏಕೈಕ ಕಾರಣದಿಂದ ರಾಜನೀತಿಯನ್ನು ತನ್ನ ಕುಕೃತ್ಯಕ್ಕೆ ಬಳಸಿಕೊಳ್ಳುವ ಶಕಾರ (ಪ್ರಭಾಕರ ಕಾಮತ್‌), ವೇಶ್ಯೆಯಾದರೂ ಪ್ರಾಣ ಹೋದರೂ ಮಾನಮಾರದಿರುವ ದಿಟ್ಟ ನಿರ್ಧಾರಕ್ಕೆ ಬಲಿಯಾಗುವ ವಸಂತ ಸೇನೆ (ಆರತಿ ಅಡಿಗ), ಸತ್ಯವನ್ನು ತೊರೆಯದೆ ಅಗತ್ಯ ಬಿದ್ದರೂ ಸುಳ್ಳು ಹೇಳದಿರುವ ಸದ್ಗುಣಿ ಚಾರುದತ್ತ (ವಾಸು ಬಾಯಾರು), ಚಾರುದತ್ತನ ಸ್ನೇಹಿತ ಮೈತ್ರೇಯಿ (ನಾಗಭೂಷಣ್‌ ಕಶ್ಯಪ್‌) ಶಕಾರನ ಸ್ನೇಹಿತ ವಿಟ (ಅಶೋಕ್‌ ಅಂಚನ್‌), ಕಳ್ಳನಾದರೂ ಮಾನವೀಯತೆ ಮೆರೆಯುವ ಶರ್ವಿಳಕ ಮತ್ತು ವೀರಕನಾಗಿ (ರಮೇಶ್‌ ಲಾಕ್ಯ), ವಸಂತ ಸೇನೆಯ ಗೆಳತಿ ಮತ್ತು ತಾಯಿಯಾಗಿ (ಸ್ವಪ್ನಕಿರಣ್‌), ಚೇಟಿ (ಶೋಭಿತಾ ಪ್ರೇಂಜಿತ್‌), ರದನಿಕೆ (ಜಾನೆಟ್‌ ಸಿಕ್ವೇರಾ), ಲೋಹಸೇನ (ಸಾನ್ವಿ ರಾಕೇಶ್‌ ಶರ್ಮ), ಕುಂಭೀಲಕ (ವೆಂಕಟೇಶ್‌ ರಾವ್‌), ಜೂಜುಕೋರನಾಗಿದ್ದು ಜೀವನದಲ್ಲಿ ಪರಿವರ್ತನೆಗೊಂಡು ಬೌದ್ಧ ಭಿಕ್ಷು ಸಂವಾಹಕ (ರುದ್ರಯ್ಯ ನವಲೀ ಹಿರೇಮಠ), ಆರ್ಯಕ (ಜೇಶ್‌ಬಾಯಾರ್‌) ಚಾರುದತ್ತನ ಹೆಂಡತಿ ಧೂತಾದೇವಿ (ಸಂಧ್ಯಾ ರವಿಕುಮಾರ್‌), ಚಂದನಕ (ಹರೀಶ್‌ ಪೂಜಾರಿ), ಶೋಧನಕ (ಸಂದೀಪ್‌ ದೇವಾಡಿಗ), ವರ್ಧಮಾನಕ (ನರಸಿಂಹ ಜಿ. ಎಸ್‌.), ನ್ಯಾಯಾಧೀಶರು (ಗುರುರಾಜ್‌ ಪುತ್ತೂರು), ಲೇಖಕ (ಸಂದೀಪ್‌ ಕೃಷ್ಣ), ಸೂತ್ರಧಾರ (ವಿನಾಯಕ ಹೆಗಡೆ), ಸೂತ್ರಧಾರನ ಹೆಂಡತಿ (ಶ್ವೇತಾ ನಾಡಿಗ್‌ ಶರ್ಮ), ಅಹಿಂತಕ (ಜಯಂತ ಶೆಟ್ಟಿ), ಸ್ಥಾವರಕ (ಆದೇಶ್‌ ಹಾಸನ) ಪ್ರತಿಯೊಬ್ಬರ ಉತ್ತಮ ನಟನಾ ಸಾಮರ್ಥ್ಯದಿಂದ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ನಿರ್ದೇಶಕರ ಜಾಣ್ಮೆಯಿಂದ ಇಡೀ ನಾಟಕವು ಪ್ರೇಕ್ಷಕರನ್ನು ತನ್ಮಯಗೊಳಿಸಿತ್ತು. ಇಂತಹ ಕ್ಲಿಷ್ಟ ನಾಟಕವನ್ನು ಪ್ರಕಾಶ್‌ ರಾವ್‌ ಪೈಯಾರ್‌ ಕೊಲ್ಲಿ ರಾಷ್ಟ್ರದ ಸುಮಾರು 26ಹವ್ಯಾಸ ಕಲಾವಿದರನ್ನು ಒಟ್ಟು ಸೇರಿಸಿ ದಕ್ಷ ನಿರ್ದೇಶನದಿಂದ ಪ್ರದರ್ಶಿಸಿದ ಸಾಹಸ ಮಾಡಿದ್ದಾರೆ. 

ವಾಸು ಬಾಯಾರು

Advertisement

Udayavani is now on Telegram. Click here to join our channel and stay updated with the latest news.

Next