ಗೋಕಾಕ: ನಗರದ ಉಪ್ಪಾರ ಗಲ್ಲಿಯಲ್ಲಿರುವ ರೇಣುಕಾದೇವಿಯ ಜಾತ್ರಾ ಮಹೋತ್ಸವ 2 ದಿನ ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನ 12ಕ್ಕೆ ಕುಂಕುಮ, ಭಂಡಾರ, ಹೂ-ಹಣ್ಣು, ಅಡಿಕೆ ಬಗೆ-ಬಗೆಯ ಖಾದ್ಯಗಳಿಂದ ನೈವೇದ್ಯ ಸಮರ್ಪಿಸಿದರು. ನಂತರ ದೇವಿಗೆ ಉಡಿ ತುಂಬಿದರು. ನಂತರ ಮಹಾಪ್ರಸಾದ ಸಾಯಂಕಾಲ 5:30 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾತ್ರಿ 9 ಗಂಟೆಗೆ ಶ್ರೀಫಲಗಳ ಲಿಲಾವು ನಂತರ ಕೃಷ್ಣಾ ದೊಡ್ಡನ್ನವರ ಅವರ ನಿರ್ದೇಶನದಲ್ಲಿ ರನ್ನ ಬೆಳಗಲಿ ಲಕ್ಷ್ಮೀ ದೇವಿ ನಾಟ್ಯ ಸಂಘ ಹಾಗೂ ಡೇವಿಡ್ ಸಂಗೀತ ಬಳಗದಿಂದ ‘ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು'(ಸಾಕು ಮಗನ ಸವಾಲ) ಎಂಬ ಸುಂದರ ಸಾಮಾಜಿಕ ನಾಟಕ ಜರುಗಿತು.
ಬುಧವಾರ ಬೆಳಗ್ಗೆ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಮರಳಿ ಕಳಿಸುವುದರೊಂದಿಗೆ ಜಾತ್ರೆಯು ಸಂಪನ್ನಗೊಂಡಿತ್ತು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಜಗದೀಶ ಶಿಂಗಳಾಪೂರ, ಕರೆಪ್ಪ ಬಡೆಪ್ಪಗೋಳ, ನಿಂಗಪ್ಪ ಭಾಗೋಜಿ, ಅಶೋಕ ಬಂಡಿ, ಶಂಕರ ಧರೆನ್ನವರ, ಮಾಯಪ್ಪ ತಹಶೀಲದಾರ, ವಿಠuಲ ಗೋಸಬಾಳ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
Advertisement
ಬೆಳಗ್ಗೆ 6ಗಂಟೆಗೆ ರೇಣುಕಾದೇವಿಗೆ ಅಭಿಷೇಕ ಜರುಗಿತು. ನಂತರ ರೇಣುಕಾದೇವಿಯ ಪಲ್ಲಕ್ಕಿಯೊಂದಿಗೆ ಸಕಲ ವಾದ್ಯಮೇಳ ಹಾಗೂ ಮುತ್ತ್ತ್ರೈದೆಯರು ಆರತಿ, ಅಂಬಲಿ ಕೊಡಗಳೊಂದಿಗೆ ಭವ್ಯ ಮೆರವಣಿಗೆಯು ನಗರದ ಕೊಳವಿ ಮಾರುತಿ ದೇವಸ್ಥಾನ, ಕುರುಬರ ಫೂಲ, ಸಂಗೊಳ್ಳಿ ರಾಯಣ್ಣ ವೃತ್ತ, ಅಪ್ಸರಾ ಖೂಟ, ತಂಬಾಕು ಖೂಟ ಮಾರ್ಗ ಸಂಚರಿಸಿ ದೇವಿಯ ಗುಡಿಯನ್ನು ತಲುಪಿತು. ಮೆರವಣಿಗೆಯಲ್ಲಿ ಭಕ್ತಾದಿಗಳು ಪರಸ್ಪರ ಭಂಡಾರ ಎರಚಿ, ಜಯಘೋಷಗಳನ್ನು ಕೂಗಿ ಭಂಡಾರದಲ್ಲಿ ಮಿಂದೆದ್ದರು.