Advertisement

ಮಿ|ಮ್ಯಾಂಗ್ಳೂರ್‌ ಹಿರಿಮೆಗೆ ಪಾತ್ರನಾದ ಸಿದ್ಧಾಂತ್‌ ಶೆಟ್ಟಿ ಕಲ್ಯಾಣ್

04:47 PM Mar 28, 2017 | Team Udayavani |

ಮುಂಬಯಿ: ವೆಸ್ಟ್‌ಲೈನ್‌ ಸಮೂಹದ ಪ್ರಾಯೋಜಕತ್ವದಲ್ಲಿ ಇನ್‌ಫೈವ್‌ನಿಟಿ ಸಂಸ್ಥೆಯು ಸೌಂದರ್ಯ ಪ್ರದರ್ಶನಕ್ಕಾಗಿ  ಯುವಜನತೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ಇನ್‌5ನಿಟಿ ಮಿಸ್‌ ಆ್ಯಂಡ್‌ ಮಿಸ್ಟರ್‌ ಮ್ಯಾಂಗ್ಳೂರ್‌-2017 ಸ್ಪರ್ಧೆಯಲ್ಲಿ ಮುಂಬಯಿ ಉಪನಗರ ಕಲ್ಯಾಣ್‌ನ ಸಿದ್ಧಾಂತ್‌ ಶೆಟ್ಟಿ “ಮಿಸ್ಟರ್‌ ಮ್ಯಾಂಗ್ಳೂರ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಥಮ ರನ್ನರ್ ಪ್ರಶಸ್ತಿಯನ್ನು ರಿತೇಶ್‌ ಶೆಟ್ಟಿ ಮುಂಬಯಿ  ಹಾಗೂ ತೃತೀಯ ಸ್ಥಾನವನ್ನು ಉಡುಪಿಯ ಶಾಂತನು ಶೆಟ್ಟಿ ಅವರು ಮುಡಿಗೇರಿಸಿಕೊಂಡಿದ್ದಾರೆ.

Advertisement

ವೆಲ್ಲಿಂಗ್‌ಕರ್ ಕಾಲೇಜಿನ ಪದವೀಧರ ವಿದ್ಯಾರ್ಥಿಯಾಗಿರುವ ಸಿದ್ಧಾಂತ್‌ ಶೆಟ್ಟಿ ಉಡುಪಿ ಪಾಂಗಳ ಮೂಲದ,  ಕಲ್ಯಾಣ್‌ ಪಶ್ಚಿಮದ ಹೊಟೇಲ್‌ ಉದ್ಯಮಿ ರಮೇಶ್‌ ಶೆಟ್ಟಿ ಮತ್ತು ಕಲ್ಯಾಣ್‌ ಕರ್ನಾಟಕ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮೂಡಬಿದ್ರೆ ಕಡಂದಲೆ ಅಲ್ಲಿನ ಪ್ರತಿಷ್ಠಿತ ಕುಟುಂಬದ ಅಹಲ್ಯಾ ಶೆಟ್ಟಿ  ದಂಪತಿ ಸುಪುತ್ರನಾಗಿದ್ದಾರೆ. ರಿತೇಶ್‌ ಶೆಟ್ಟಿ ಅವರು  ಬೊರಿವಿಲಿಯ ನಿವಾಸಿಯಾಗಿದ್ದಾರೆ.

18 ರಿಂದ 24ರ ಹರೆಯದ ಸುಮಾರು 300 ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯ ಆಡಿಶನ್‌ ಮಂಗಳೂರಿನ ಫೂರಮ್‌ ಪಿಜಾØ ಮಾಲ್‌ ಮತ್ತು ಮಣಿಪಾಲದ ಹಕುನ ಮಟ ಕ್ಲಬ್‌ನಲ್ಲಿ ನಡೆದಿತ್ತು. ಅಂತಿಮ ಸುತ್ತಿನ ಸ್ಪರ್ಧೆಯು ಮಾ. 24 ರಂದು  ಸಂಜೆ ಮಂಗಳೂರು ಬೊಂದೆಲ್‌ ಇಲ್ಲಿನ ಮ್ಯಾಂಗ್ಳೂರ್‌ಹಿಲ್ಸ್‌ನಲ್ಲಿ ನಡೆಯಿತು. ಸ್ಪರ್ಧಾ ಸಂಘಟಕ ಪ್ರತೀಕ್‌ ಶೆಟ್ಟಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದು, ವಿನ್ನರ್ ಪ್ರಶಸ್ತಿ ಪಡೆದ ಸಿದ್ಧಾಂತ್‌ ಶೆಟ್ಟಿ ಅವರಿಗೆ ಮಾಲ್ಗುಡಿ ಟಾಕೀಸ್‌ನ ಅಶೋಕ್‌ ಶೆಟ್ಟಿ ನಿರ್ಮಾಪಕತ್ವದ ಚಲನಚಿತ್ರದಲ್ಲಿ ನಟಿಸುವ ಅವಕಾಶ ಒದಗಲಿದೆ ಎನ್ನಲಾಗಿದೆ. 

ಚಿತ್ರ- ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next