Advertisement
ಆದರೆ ಅದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದೆಂದು ಯಾರೂ ಆಲೋಚಿಸುವುದಿಲ್ಲ, ಅದಕ್ಕಾಗಿ ವೆಚ್ಚವನ್ನು ಮಾಡಲೂ ಹಿಂದೆ ಮುಂದೆ ನೋಡುತ್ತಾರೆ.
ಆಫ್ರಿಕಾ ಜನರೊಂದಿಗೆ ಅವರ ಸಂಸ್ಕೃತಿ ಇಂದಿಗೂ ಹಾಸುಹೊಕ್ಕಾಗಿದೆ. ಅವರ ಆಚಾರ ವಿಚಾರಗಳೊಂದಿಗೆ ಅವರ ಸಂಗೀತ ಪರಂಪರೆಯೂ ಭಿನ್ನವಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರು ನುಡಿಸುವ ಎಂಬಿರಾ, ಕಲಿಂಬ, ಕೋರಾ, ಎನ್‌ಗೊನಿ ವಾದ್ಯ ಪರಿಕರಗಳು, ಕೊಂಗೋ, ಬೊಂಬಾ, ಕುಂಬಿಯಾದಂತಹ ರಿದಮಿಕ್ ಬ್ಯಾಂಡ್‌ಗಳಿಗೂ ಎಲ್ಲೆಡೆ ವಿಶೇಷ ಮಾನ್ಯತೆ ಇದೆ. ಆದರೆ ಸರಕಾರ, ಸ್ಥಳೀಯಾಡಳಿತದ ಸಹಕಾರ ಈ ಬಗ್ಗೆ ತುಂಬಾ ಕೆಳಮಟ್ಟದಲ್ಲಿದೆ. ಇಂತಹ ಸಂದರ್ಭ ಮಿ. ಈಝಿ ಅವರು ಆಫ್ರಿಕಾ ಖಂಡದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ಆಫ್ರಿಕನ್ ಸಂಗೀತಗಾರರನ್ನು ಬೆಂಬಲಿಸಲು 20 ಮಿಲಿಯನ್ ಡಾಲರ್‌ನಲ್ಲಿ ಆಫ್ರಿಕಾ ಮ್ಯೂಸಿಕ್ ಫಂಡ್ (ಎಎಂಎಫ್) ಹುಟ್ಟು ಹಾಕಿದ್ದಾರೆ.
Related Articles
Advertisement
ನಾವು ಯಾರೊಂದಿಗಾದರೂ ಎರಡು ವರ್ಷಗಳ ಒಪ್ಪಂದವನ್ನು ಹೊಂದಿದ್ದೇವೆ. ಆ ಎರಡು ವರ್ಷಗಳಲ್ಲಿ, ನಾವು ಅವರ ಪ್ರತಿನಿಧಿಯಾಗಿರುತ್ತೇವೆ, ಅವರ ಸಂಗೀತವನ್ನು ನಿರ್ವಹಿಸಲು ಅವರಿಗೆ ಸಹಾಯ ಮಾಡುತ್ತೇವೆ ಮತ್ತು ಅವರು ಬೆಳೆದಂತೆ ನಾವು ಅವರ ಗಳಿಕೆಯಿಂದ ಆರಂಭಿಕ ಹೂಡಿಕೆಯನ್ನು ಕಡಿತಗೊಳಿಸುತ್ತೇವೆ. ಕಲಾವಿದರು ಮೂಲತಃ ತಮ್ಮ ಸಂಗೀತವನ್ನು ವಿತರಿಸಲು ವೇದಿಕೆಯನ್ನು ಬಯಸುತ್ತಾರೆ ಮತ್ತು ಅವರ ಪ್ರಗತಿಯನ್ನು ನಾವು ಮೇಲ್ವಿಚಾರಣೆ ಮಾಡುತ್ತೇವೆ. ಆ ಮೂಲಕ ನಾವು ಯಾರಿಗೆ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಡೇಟಾ ಬೆಂಬಲಿತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮಿ. ಈಝಿ ಹೇಳುತ್ತಾರೆ.ಆಯ್ದ ಕಲಾವಿದರಿಗೆ ಅವರ ಆದಾಯ ಮತ್ತು ಯೋಜಿತ ಆದಾಯವನ್ನು ಅವಲಂಬಿಸಿ, ಸ್ಟ್ರೀಮಿಂಗ್ ಆದಾಯದಂತಹ ಮಾಪನಗಳನ್ನು ಬಳಸಿ ಸಹಾಯಧನ ನೀಡಲಾಗುತ್ತದೆ. ಈ ಕ್ಷೇತ್ರದಲ್ಲಿ ಈಗಾಗಲೇ ಹೆಜ್ಜೆಗುರುತುಗಳನ್ನು ಮೂಡಿಸಿರುವ ಕಲಾವಿದರಿಗಾಗಿ, ಪ್ರತಿಭೆ ಉಳ್ಳವರ ಸ್ಟ್ರೀಮಿಂಗ್ ನಡೆಸಿ ಅವರಿಗೆ ಆದಾಯಗಳಿಸುವ ಮಾರ್ಗವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಕಲಾವಿದರಿಗೆ ಅವರ ಸಂಗೀತ ಅರಿವವನ್ನು ವಿಸ್ತರಿಸಲು ಅವರಿಗೆ ಮುಂಗಡ ಹಣವನ್ನು ನೀಡಲಾಗುವುದು. ಹೀಗೆ ಆರ್ಥಿಕವಾಗಿ ಬಲಗೊಂಡ ಬಳಿಕ ಆತನಿಗೆ ನೀಡಿದ ನೆರವನ್ನು ಮತ್ತೆ ಹಿಂಪಡೆದು ನಿಧಿಯಲ್ಲಿ ಆತನ ಸಹಭಾಗಿತ್ವವನ್ನು ಉಳಿಸಿಕೊಳ್ಳಲಾಗುತ್ತದೆ. ಇತರಿಂದ ಹಲವು ಕಲಾವಿದರಿಗೆ ನೆರವಾಗಲು ಸಹಾಯವಾಗುವ ಉದ್ದೇಶ ಎಎಂಎಫ್ನದ್ದು. ಮಿ. ಈಝಿ ಬಗ್ಗೆ…
ಮಿ. ಈಝಿ ಅವರ ನಿಜವಾದ ಹೆಸರು ಒಲುವಾಟೋಸಿನ್ ಅಜಿಬಾಡೆ. ಸ್ಪಾಟಿಫೈನಲ್ಲಿ ಐದು ಮಿಲಿಯನ್‌ಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಮಿ. ಈಝಿ 2018ರಲ್ಲಿ ಎಂಪಾವಾ ಆಫ್ರಿಕಾ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದರು. ಈ ಮೂಲಕ ಕಲಾವಿದರಿಗೆ ಸಂಗೀತ ಮಾರಾಟ, ರೇಡಿಯೋ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಲು ನೆರವು ನೀಡಿದ್ದರು. ಅಷ್ಟೇ ಅಲ್ಲದೆ ಸ್ವತಂತ್ರ ಸಂಗೀತ ಉದ್ಯಮಿಯಾಗಲು, ತರಬೇತಿ ನೀಡಿ ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿದ್ದರು. ಇದೀಗ ಎಎಂಎಫ್ನಂತಹ ಮತ್ತೂಂದು ಯೋಜನೆ ರೂಪಿಸಿ ಆಫ್ರಿಕಾ ಸಂಗೀತವನ್ನು ಜಗತ್ತಿಗೆ ಪಸರಿಸಲು ಹೊರಟಿದ್ದಾರೆ.