Advertisement

2ನೇ ಮಹಾಯುದ್ಧದ ಜರ್ಮನ್‌ ಹಡಗು ಅವಶೇಷ ಮೇಲೆತ್ತುವ ಎಂಪಿಟಿ

11:52 AM Oct 12, 2017 | udayavani editorial |

ಪಣಜಿ : ಗೋವೆಯ ವಾಸ್ಕೋದಲ್ಲಿ ಎರಡನೇ ಮಹಾಯುದ್ಧದ ವೇಳೆ ಸಮುದ್ರ ತಳ ಸೇರಿದ್ದ ಜರ್ಮನ್‌ ಯುದ್ಧ ನಾವೆಗಳ ಅವಶೇಷಗಳನ್ನು ಮೇಲಕ್ಕೆತ್ತಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು ಮರ್ಮಗೋವಾ ಪೋರ್ಟ್‌ ಟ್ರಸ್ಟ್‌ ಉದ್ದೇಶಿಸಿದೆ.

Advertisement

ಎರಡನೇ ಮಹಾಯುದ್ಧದ ವೇಳೆ ಸಾಗರ ತಳ ಸೇರಿದ್ದ ಜರ್ಮನ್‌ ಹಡಗುಗಳ ಅವಶೇಷಗಳು, ಇಲ್ಲಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ವಾಸ್ಕೋದಲ್ಲಿನ ಎಂಪಿಟಿಯಲ್ಲಿ  ಮೀನುಗಾರಿಕೆ ಬಂದರು ನಿರ್ಮಾಣ ಮತ್ತು ಸರಕು ಜೆಟ್ಟಿ  ನಿರ್ಮಾಣಕ್ಕೆ ಅಪಾಯಕಾರಿಯಾಗಿವೆ.

ಕೇಂದ್ರ ನೌಕಾ ಸಚಿವಾಲಯ ವಾಸ್ಕೋದಲ್ಲಿ ಮೀನುಗಾರಿಕೆ ಬಂದರು ನಿರ್ಮಿಸುವ ಯೋಜನೆಯನ್ನು ರೂಪಿಸಿರುವುದರಿಂದ ಸಾಗರ ತಳ ಸೇರಿರುವ ಜರ್ಮನ್‌ ಹಡಗುಗಳ ಅವಶೇಷಗಳನ್ನು ತೆರವುಗೊಳಿಸುವುದು ಅಗತ್ಯವಾಗಿದೆ ಎಂದು ಇಲ್ಲಿನ ಹಿರಿಯ ಅಧಿಕಾರಿಯೋರ್ವರು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next