Advertisement
ತನ್ನ ವ್ಯಾಪ್ತಿಯ ಕೊಳವೆಬಾವಿ, ತೆರೆದ ಬಾವಿ ಪರಿಸರದಲ್ಲಿ ಜಲಮರುಪೂರಣಕ್ಕೆ ಕಾಮಗಾರಿ ನಡೆಸುವ ಮೂಲಕ ನೀರಿನ ಬರವನ್ನು ಈ ವರ್ಷವೇ ಬಹುಪಾಲು ಇಳಿಸುವ ಭರವಸೆಯನ್ನು ನಗರ ಪಂಚಾಯತ್ ಆಡಳಿತ ಹೊಂದಿದೆ. ಪ್ರತಿ ಬೋರ್‌ವೆಲ್‌ಗೆ ಸುಮಾರು 82 ಸಾವಿರ ರೂ. ವೆಚ್ಚದಲ್ಲಿ 7 ಕಡೆಗಳಲ್ಲಿ ಈ ಯೋಜನೆ ಅಳವಡಿಸಲು ಸ್ಥಳೀಯ ಆಡಳಿತ ಮುಂದಾಗಿದೆ.
Related Articles
Advertisement
ಇದನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದರೆ ನೀರಿನ ಬರ ಕಡಮೆಯಾಗುವ ಲಕ್ಷಣಗಳಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಸಾರ್ವಜನಿಕರೂ ತಮ್ಮ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ನೀರಿಂಗಿಸಲು ಮುಂದಾದರೆ ನೀರಿನ ಪ್ರಮಾಣ ವೃದ್ಧಿಸುವುದಲ್ಲದೆ, ಸಮೀಪದ ಬಾವಿ-ಕೆರೆಗಳಲ್ಲೂ ನೀರಿನ ಒರತೆ ಜಾಸ್ತಿಯಾಗುವುದು ಈಗಾಗಲೇ ಅನುಷ್ಠಾನಗೊಳಿಸಿದ ಪ್ರದೇಶದಲ್ಲಿ ಸಾಬೀತಾಗಿದೆ.
ಮನೆ ನಿರ್ಮಾಣದ ಜತೆಗೆ ನೀರಿಂಗಿಸಲು ಜನ ಮುಂದಾದರೆ ಕನಿಷ್ಠ ಅವರ ಮನೆಯ ನೀರಿನ ಸಮಸ್ಯೆಯಾದರೂ ನೀಗುತ್ತದೆ. ಸಾರ್ವಜನಿಕರ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ನಗರ ಪಂಚಾಯತ್‌ನ ಎಂಜಿನಿಯರ್ ಅಶ್ವಿನಿ ಹೇಳಿದ್ದಾರೆ.
ಪ್ರಾಯೋಗಿಕ ಅನುಷ್ಠಾನಈ ಬಾರಿ ಪ್ರಾಯೋಗಿಕವಾಗಿ ಹಲವೆಡೆ ಜಲಪೂರಣ ವ್ಯವಸ್ಥೆಯನ್ನು ಬೋರ್‌ವೆಲ್‌ಗಳ ಸಮೀಪದಲ್ಲಿ ತಜ್ಞರ ಸಲಹೆ ಅನುಸಾರ ಕ್ರಮಬದ್ಧವಾಗಿ ನಿರ್ಮಿಸಲಾಗಿದೆ. ಇದರಲ್ಲಿ ಯಶಸ್ಸು ಸಿಗುವ ವಿಶ್ವಾಸ ನಮಗಿದ್ದು, ಮುಂದಿನ ಬಾರಿ ಇನ್ನಷ್ಟು ಪ್ರಯತ್ನ ಮಾಡಿ, ಯೋಜನೆ ಅನುಷ್ಠಾನ ಮಾಡಲಾಗುವುದು. ಮನೆಗಳಲ್ಲಿ ಹಾಗೂ ಖಾಸಗಿ ಜಾಗಗಳಲ್ಲಿ ಮಳೆ ಕೊಯ್ಲು ಯೋಜನೆ ಅನುಷ್ಠಾನಕ್ಕೆ ಪ್ರೋತ್ಸಾಹ ಕೊಡುವ ಕೆಲಸವನ್ನೂ ನಗರ ಪಂಚಾಯತ್ ಮಾಡಲಿದೆ.
ಸುನೀಲ್ ಆಳ್ವ,
ಅಧ್ಯಕ್ಷರು, ನಗರ ಪಂಚಾಯತ್, ಮೂಲ್ಕಿ ಸಹಕಾರ ಮುಖ್ಯ
ರಾಜ್ಯದ ಹಲವೆಡೆಗಳಲ್ಲಿ ಈ ಯೋಜನೆಗೆ ಮಾರ್ಗದರ್ಶನ ನೀಡಿ ಯಶಸ್ಸು ಪಡೆದ ತಜ್ಞರ ಸಲಹೆಯಂತೆ ಜಲಪೂರಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮನೆ ನಿರ್ಮಾಣ ಪರವಾನಿಗೆಯಲ್ಲಿ ಮಳೆಕೊಯ್ಲು ಯೋಜನೆಗೆ ಹಾಕಿರುವ ಶರತ್ತು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು. ಸಾರ್ವಜನಿಕರ ಸಹಕಾರದಿಂದ ನೀರಿನ ಸಮಸ್ಯೆ ನಿವಾರಿಸಬಹುದು.
ಇಂದು ಎಂ.
ಮುಖ್ಯಾಧಿಕಾರಿ, ನಗರ ಪಂಚಾಯತ್, ಮೂಲ್ಕಿ ವಿಶೇಷ ವರದಿ