Advertisement

MP Yaduveer: ಸಿಎಂ ರಾಜೀನಾಮೆ ಸೂಕ್ತ; ಯದುವೀರ್‌

08:50 PM Aug 17, 2024 | Team Udayavani |

ಮೈಸೂರು: ಮುಡಾ ನಿವೇಶನ ಹಗರಣದ ವಿಚಾರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸೂಕ್ತ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

Advertisement

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಕಾನೂನಾತ್ಮಕವಾಗಿ ಯಾವ ರೀತಿ ಮುಂದುವರಿಯಬೇಕೋ ಅದನ್ನು ಮಾಡುತ್ತಾರೆ. ಸಿದ್ದರಾಮಯ್ಯ ಅವರದು ಏನೂ ತಪ್ಪಿಲ್ಲ ಅಂದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ತಪ್ಪಿಲ್ಲ ಅಂತ ವರದಿ ಬಂದರೆ ಮತ್ತೆ ತಮ್ಮ ಪದವಿಯಲ್ಲಿ ಮುಂದುವರಿಯಲಿ ಎಂದು ಸಲಹೆಯನ್ನು ನೀಡಿದರು.

ಸರಕಾರವನ್ನು ಕೆಳಗೆ ಇಳಿಸುವುದು ನಮಗೆ ಸಂತೋಷದ ವಿಚಾರ ಅಲ್ಲ, ಜನರು 136 ಸ್ಥಾನಗಳನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸರಕಾರ ನಡೆಸಲು ಅವಕಾಶಕೊಟ್ಟಿದ್ದಾರೆ. ನಾವೂ ಜವಾಬ್ದಾರಿ ವಿಪಕ್ಷವಾಗಿ ನಮ್ಮ ಹೋರಾಟ ಮಾಡುತ್ತಿದ್ದೇವೆ. ಹಾಗೇ ಉತ್ತಮ ಆಡಳಿತಕ್ಕಾಗಿ ಜವಾಬ್ದಾರಿಯಿಂದ ಹೋರಾಡುತ್ತಿದ್ದೇವೆ. ಇಂತಹ ಸಂದರ್ಭಗಳು ಈ ಹಿಂದೆ ಸಾಕಷ್ಟು ಬಂದು ಹೋಗಿವೆ. ಆಗೆಲ್ಲ ರಾಜ್ಯಪಾಲರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next