ಇಂದೋರ್: ನವೆಂಬರ್ 28 ರಂದು ಮಧ್ಯಪ್ರದೇಶದ ಇಂದೋರ್ ನಗರದ ಖಾಲ್ಸಾ ಸ್ಟೇಡಿಯಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ನಡೆಸಿದರೆ ಬಾಂಬ್ ಸ್ಫೋಟಗಳು ಸಂಭವಿಸುತ್ತವೆ ಎಂದು ಅನಾಮಧೇಯ ಪತ್ರದ ಬೆದರಿಕೆಯ ನಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮೂವರನ್ನು ಗುರುತಿಸಲಾಗಿದ್ದು, ಪೊಲೀಸರ ತಂಡ ಹರಿಯಾಣಕ್ಕೆ ತೆರಳಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಶನಿವಾರ ಹೇಳಿದ್ದಾರೆ.
ನವೆಂಬರ್ 28 ರಂದು ಇಂದೋರ್ ನಗರದ ಖಾಲ್ಸಾ ಸ್ಟೇಡಿಯಂನಲ್ಲಿ ಯಾತ್ರೆಯನ್ನು ನಡೆಸಿದರೆ ಬಾಂಬ್ ಸ್ಫೋಟಗಳನ್ನು ನಡೆಸಲಾಗುವುದು ಎಂದು ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿತ್ತು.
1984 ರ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿರುವ ಪತ್ರವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರಿಗೆ ಜೀವ ಬೆದರಿಕೆಯನ್ನು ಸಹ ಹಾಕಲಾಗಿತ್ತು.