Advertisement

ವದಂತಿಗೆ ಕಿವಿಗೊಡದೇ ಲಸಿಕೆ ಹಾಕಿಸಿಕೊಳ್ಳಿ: ಉದಾಸಿ

07:50 PM Apr 15, 2021 | Team Udayavani |

ಗಜೇಂದ್ರಗಡ: ಮಹಾಮಾರಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳ ಜೊತೆಗೆ ಸಮರೋಪಾದಿಯಲ್ಲಿ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಕೊವಿಡ್‌-19 ಲಸಿಕಾ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವದೇಶದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್‌ -19ರ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಈ ಲಸಿಕೆಯ ಒಂದು ಮತ್ತು ಎರಡನೇ ಡೋಸ್‌ ಪಡೆದ 15 ದಿನಗಳ ನಂತರ ಮನುಷ್ಯನ ದೇಹದಲ್ಲಿ ಕೊರೊನಾ ವೈರಸ್‌ ನಿಯಂತ್ರಿಸುವ ಶಕ್ತಿ ಬರುತ್ತದೆ. ಹೀಗಾಗಿ, ಲಸಿಕೆ ಪಡೆದ ನಂತರ ಕೋವಿಡ್‌ 19 ಪಾಸಿಟಿವ್‌ ಬರುತ್ತದೆ ಎಂಬ ವದಂತಿಗಳಿಗೆ ಕಿವಿಗೊಡದೆ, 45 ವರ್ಷ ಮೇಲ್ಪಟ್ಟವರು ಕೋವಿಡ್‌ ಲಸಿಕೆ ಪಡೆದುಕೊಂಡು ಆರೋಗ್ಯವಂತರಾಗಿರಬೇಕು ಎಂದರು.

ಬೇರೆ ಬೇರೆ ದೇಶಗಳಲ್ಲಿ ಕೋವಿಡ್‌-19 ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಅತ್ಯಂತ ಸಾಂದ್ರತೆ ಹೊಂದಿರುವ ನಮ್ಮ ದೇಶದಲ್ಲಿ ಈಗಾಗಲೇ ಕೋವಿಡ್‌-19ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ. ಆದರೆ ಇದಕ್ಕೆ ಜನರ ಸಹಕಾರ ಅಗತ್ಯ. ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದರು. ಆದರೆ ಇಂದು ಜನರಲ್ಲಿ ಕೊರೊನಾ ಭಯವಿಲ್ಲ. ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ಎಲ್ಲರ ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ. ಹೀಗಾಗಿ, ಎಲ್ಲರೂ ಸರ್ಕಾರಗಳ ಮಾರ್ಗಸೂಚಿಗಳನ್ನು ಪಾಲಿಸ ಬೇಕೆಂದರು.

ಶಾಸಕ ಕಳಕಪ್ಪ ಬಂಡಿ, ಬಸವರಾಜ ಬೆಲ್ಲದ, ಭಾಸ್ಕರ್‌ ರಾಯಬಾಗಿ, ಶರಣಪ್ಪ ರೇವಡಿ, ಅಶೋಕ ವನ್ನಾಲ, ಜಿಲ್ಲಾ ಆರೋಗ್ಯ ಅ ಧಿಕಾರಿ ಡಾ. ಸತಿಶ ಬಸರಿಗಿಡದ, ಮಕ್ಕಳ ಆರೋಗ್ಯ ಕಲ್ಯಾಣ ಅಧಿ ಕಾರಿ ಡಾ.ಗೋಜನೂರ, ತಾಲೂಕು ಆರೋಗ್ಯ ಅ ಧಿಕಾರಿ ಡಾ.ಬಿ.ಎಸ್‌.ಭಜಂತ್ರಿ, ಡಾ.ರಮೇಶ ದಿವಿಗಿಹಳ್ಳಿ, ಡಾ.ಚಿದಾನಂದ ಮುಂಡಾಸದ, ಕೆ.ಎ. ಹಾದಿಮನಿ, ಮಂಜು ವರಗಾ, ಮನೋಹರ ಕಣ್ಣಿ, ಪ್ರವೀಣ ರಾಠೊಡ, ಸತೀಶ ಹಿರೇಮನಿ, ಆರೋಗ್ಯ ರûಾ ಸಮಿತಿ ಸದಸ್ಯರು, ಆಶಾ ಕಾರ್ಯಕರ್ತೆಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next