Advertisement

ಕೋವಿಡ್ ಲಸಿಕೆ ಪಡೆದ ಸಂಸದ‌ ಸಂಗಣ್ಣ ಕರಡಿ

01:31 PM Mar 05, 2021 | Team Udayavani |

ಕೊಪ್ಪಳ :  ಸಂಸದ ಸಂಗಣ್ಣ ಕರಡಿ ಪತ್ನಿಯೊಂದಿಗೆ ಆಗಮಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದರು.

Advertisement

ಎರಡನೇ‌ ಹಂತದ ಲಸಿಕೆ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಿದ್ದು, ಹಿರಿಯರಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ. ಸಂಸದ ಸಂಗಣ್ಣ ಕರಡಿ‌ ಹಾಗೂ ಅವರ ಪತ್ನಿ ನಿಂಗಮ್ಮ ಕರಡಿ ಆಸ್ಪತ್ರೆಗೆ ಆಗಮಿಸಿ ಲಸಿಕೆ ಪಡೆದರು.

ಲಸಿಕೆ ಪಡೆದ ಬಳಿಕ ಅವರನ್ನು 15 ನಿಮಿಷಗಳ ಕಾಲ ವಿಶ್ರಾಂತಿ ಕೊಠಡಿಯಲ್ಲಿ ಇರಿಸಲಾಗಿತ್ತು. ಈ ವೇಳೆ ಡಿಎಚ್ಒ ಡಾ. ಅಲಕನಂದಾ, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ, ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ಸೇರಿದಂತೆ ಇತತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next