Advertisement

ರಾಹುಲ್‌ಗಾಂಧಿ ಸ್ಪರ್ಧಿಸಿದರೂ ಸೋಲು ಖಚಿತ

02:50 PM Jan 02, 2023 | Team Udayavani |

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಲ್ಲ ಅವರ ಲೀಡರ್‌ ರಾಹುಲ್‌ ಗಾಂಧಿನೇ ಬಂದರೂ ಭಯವಿಲ್ಲ, ಇಲ್ಲಿನ ಜನ ಈಗಾಗಲೇ ಅವರನ್ನು ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸಲು ಶಪಥ ಮಾಡಿದ್ದಾರೆ. ಕೋಲಾರದಲ್ಲಿ ವರ್ತೂರು ಪ್ರಕಾಶ್‌ ಸೇರಿದಂತೆ ಜಿಲ್ಲೆಯಲ್ಲಿ ಕನಿಷ್ಠ 4 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದು ಸಂಸದ ಎಸ್‌.ಮುನಿಸ್ವಾಮಿ ಘೋಷಿಸಿದರು.

Advertisement

ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ನೇತೃತ್ವದಲ್ಲಿ ನಡೆದ ಬೃಹತ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದರು. ಜನರ ಜತೆಗಿರುವ ವರ್ತೂರು ಪ್ರಕಾಶ್‌ ಕೆಲಸ ಮಾಡುತ್ತಿದ್ದಾರೆ, ಅಧಿಕಾರ ಇಲ್ಲದಿದ್ದರೂ ಹಳ್ಳಿಹಳ್ಳಿಗೆ ಹೋಗಿ ಜನರ ಕಷ್ಟ ಕೇಳುತ್ತಿದ್ದಾರೆ, ಇದನ್ನು ಬಿಜೆಪಿ ಹೈಕಮಾಂಡ್‌ ಗಮನಿಸುತ್ತಿದೆ, ಟಿಕೆಟ್‌ ನೀಡುವುದು ಖಚಿತ ಎಂದರು.

ಹಾಲು,ಮೊಸರು ಕಲ್ಲಿನಲ್ಲೂ ಮೋಸ : ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕಲ್ಲು, ಮಣ್ಣು, ಹಾಲು, ಮೊಸರಿನಲ್ಲೂ ಜನರನ್ನು ವಂಚಿಸಿದ್ದಾರೆ. ಅವರ ಅಧ್ಯಕ್ಷತೆಯ ಕೋಲಾರ ಹಾಲು ಒಕ್ಕೂಟದಲ್ಲಿ ಅವರ ಮನೆಯ ಮೂರು ಕಾರುಗಳಿಗೆ ಡೀಸೆಲ್‌ ಹಾಕಿಸ್ತಾರೆ, ಈ ಹಣ ರೈತರದ್ದು, ಈ ವಂಚನೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್‌ ಮಾತನಾಡಿ, ವಕ್ಕಲೇರಿ ಹೋಬಳಿಯ ಜನತೆ ಬುದ್ದಿವಂತರು, ಈ ಕ್ಷೇತ್ರದಲ್ಲಿ ಎರಡು ಚುನಾವಣೆಯಲ್ಲಿ ನನಗೆ ಲೀಡ್‌ ನೀಡಿದ್ದಾರೆ, ಗ್ರಾ.ಪಂ ಸದಸ್ಯ ಮಂಜುನಾಥ್‌, ಮುಖಂಡರಾದ ಅಬ್ಬಣ್ಣ, ಶ್ರೀಪತಿ, ಪ್ರಕಾಶ್‌,ನಾರಾಯಣಗೌಡ, ಎಲ್ಲರೂ ಇಂದು ಸೇರ್ಪಡೆಯಾಗುತ್ತಿದ್ದು, ಬಿಜೆಪಿ ಕಟ್ಟುವ ಕೆಲಸ ಮಾಡಿ ಎಂದು ಕರೆ ನೀಡಿದರು.

ಇಂದು ಕುರಗಲ್‌ಗ್ರಾಮದ ಮುಖಂಡರಾದ ಮುನೇಶ್ವರಪ್ಪ, ನಾರಾಯಣಸ್ವಾಮಿ, ರಾಜಣ್ಣ, ಪ್ರಕಾಶ್‌, ಮುನಿನಾರಾಯಣಪ್ಪ, ಮುನೇಶ್‌, ವೆಂಕಟೇಶ್‌, ಪ್ರವೀಣ್‌, ರಾಮಪ್ಪ, ವಿಜಯಕುಮಾರ್‌, ಚಿಕ್ಕಮುನಿರಾಜು, ಆಂಜಿ ಮತ್ತಿತರರು ಬಿಜೆಪಿಗೆ ಸೇರ್ಪಡೆಯಾದರು.

Advertisement

ಮಾಜಿ ಶಾಸಕರಾದ ಸಂಪಂಗಿ, ಮಂಜುನಾಥಗೌಡ, ಎಂ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಬಿಜೆಪಿ ಮುಖಂಡರಾದ ಬೆಗ್ಲಿ ಪ್ರಕಾಶ್‌, ಜಿಪಂ ಮಾಜಿ ಸದಸ್ಯರಾದ ಅರುಣ್‌ ಪ್ರಸಾದ್‌,ರೂಪಶ್ರೀ, ಬಂಕ್‌ ಮಂಜುನಾಥ್‌, ಸೂಲೂರು ಆಂಜಿನಪ್ಪ, ತಂಬಳ್ಳಿ ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ವರ್ತೂರು ಗೆಲುವು ತಡೆಯಲು ಸಾಧ್ಯವಿಲ್ಲ : ಸಿದ್ದರಾಮಯ್ಯ ಮತ್ತವರ ಕಾಂಗ್ರೆಸ್‌ ಪಕ್ಷ ಕುರುಬರು, ಒಕ್ಕಲಿಗರು, ದಲಿತರು, ಅಲ್ಪಸಂಖ್ಯಾತರ ವಿರೋಧಿಯಾಗಿದೆ, ಇವರೆಲ್ಲರೂ ಸಿದ್ದರಾಮಯ್ಯ ಕೋಲಾರಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ. ಜನರೊಂದಿಗೆ ಮಿಳಿತವಾಗಿರುವ ವರ್ತೂರು ಪ್ರಕಾಶ್‌ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ದಲಿತರ ವಿರೋಧಿ ಕಾಂಗ್ರೆಸ್‌ ಎಂಬುದು ಅನೇಕ ನಿದರ್ಶನಗಳ ಮೂಲಕ ಸತ್ಯವಾಗಿದೆ, ಬಿಜೆಪಿ ಎಂದಿಗೂ ದಲಿತ ವಿರೋಧಿಯಲ್ಲ, ವಾಜಪೇಯಿ, ಮೋದಿಯವರ ಆಡಳಿತದಲ್ಲಿ ದಲಿತರಿಗಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next