Advertisement
ಕನ್ನಡ ಪತ್ರಿಕೆಯ ಅಂಕಣಕಾರ ಮತ್ತು ಬರಹಗಾರರಾಗಿರುವ ಪ್ರತಾಪ್ ಸಿಂಹ ಅವರಿಗೆ ಅಂಕಣಕಾರರ ಗೌರವಧನ ಮತ್ತು ಸಂಸದರ ವೇತನ ಆದಾಯದ ಮೂಲವಾದರೆ, ಅವರ ಪತ್ನಿ ಡಾ.ಅರ್ಪಿತ ಅವರಿಗೆ ಮೈಸೂರಿನ ಪ್ರೀಮಿಯರ್ ರೀಟೇಲ್ ಸಂಸ್ಥೆಯಲ್ಲಿನ ವ್ಯಾಪಾರ ಆದಾಯ ಮೂಲವಾಗಿದೆ.
Related Articles
ಸೋಮವಾರ ಪೇಟೆಯಲ್ಲಿ ಮೋಹನ್ ರಾಂ ಎಂಬುವವರಿಗೆ ಮನೆ ಬಾಡಿಗೆಗಾಗಿ 2 ಲಕ್ಷ ಮುಂಗಡ ನೀಡಿದ್ದರೆ, ಅರ್ಪಿತ ಅವರು 2,27,078 ರೂ. ನೀಡಿದ್ದಾರೆ.
Advertisement
ಪ್ರತಾಪ್ ಸಿಂಹ 11,09,697 ರೂ. ಮೌಲ್ಯದ ಚರಾಸ್ತಿ, 63,14,697 ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದರೆ, ಅರ್ಪಿತ ಸಿಂಹ ಅವರು 40,32,435 ರೂ. ಮೌಲ್ಯದ ಚರಾಸ್ತಿ, 1,21,82,435 ರೂ. ಮೌಲ್ಯದ ಸ್ವಯಾರ್ಜಿತ ಸ್ವತ್ತುಗಳನ್ನು ಹೊಂದಿದ್ದಾರೆ.
ಪ್ರತಾಪ್ ಸಿಂಹ ಹೆಸರಲ್ಲಿ 2011ರ ಮಾಡೆಲ್‌ನ 3,25,545 ರೂ. ಮೌಲ್ಯದ ಹುಂಡೈ 120 ಕಾರು, ಅರ್ಪಿತ ಅವರ ಹೆಸರಲ್ಲಿ 2018ರ ಮಾಡೆಲ್‌ನ 24,66,995 ರೂ. ಮೌಲ್ಯದ ಕ್ರಿಸ್ಟಾ 2.4 ಕಾರು ಇದೆ. ಪ್ರತಾಪ್ ಸಿಂಹ ಅವರ ಬಳಿ ಯಾವುದೇ ಚಿನ್ನಾಭರಣವಿಲ್ಲ. ಅರ್ಪಿತ ಅವರ ಬಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ.
ಪ್ರತಾಪ್ ಸಿಂಹ ಸರಸ್ವತಿಪುರಂನ ಎಸ್‌ಬಿಐ ಪರ್ಸನಲ್ ಬ್ಯಾಂಕಿಂಗ್ ಶಾಖೆಯಲ್ಲಿ ಚಿನ್ನದ ಮೇಲೆ 3,53,866 ರೂ. ಸಾಲಪಡೆದಿದ್ದರೆ, ಅರ್ಪಿತ ಸಿಂಹ ಅವರು, ಶ್ರೀ ಕನ್ಯಾಕಾ ಪರಮೇಶ್ವರಿ ಕೋ-ಆಫ್ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ 2.35 ಲಕ್ಷ ರೂ. ಸಾಲ ಪಡೆದಿದ್ದಾರೆ. ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ 14,62,839 ರೂ. ಕಾರು ಸಾಲ ಪಡೆದಿದ್ದಾರೆ.
ಬೆಂಗಳೂರಿನ ಶೇಷಾಚಲ ಎಂಬುವವರಿಗೆ 16,56,355 ರೂ. ಸಾಲ ಕೊಡಬೇಕಿದೆ. ಅರ್ಪಿತ ಅವರು ಪತಿ ಪ್ರತಾಪ್ ಸಿಂಹ ಅವರಿಗೇ 2,3,078 ರೂ. ಸಾಲ ಪಾವತಿಸಬೇಕಿದೆ. ಸೆಂತಿಲ್ ಕುಮಾರ್ ಅವರಿಗೂ 4.50 ಲಕ್ಷ ರೂ. ಸಾಲ ಕೊಡಬೇಕಿದೆ. ಪ್ರತಾಪ್ ಸಿಂಹ ಒಟ್ಟು 23,64,087 ರೂ. ಸಾಲ, ಅರ್ಪಿತ ಸಿಂಹ 23,74,917 ರೂ. ಸಾಲ ಹೊಂದಿದ್ದಾರೆ.