ಶಿವಮೊಗ್ಗ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಮನೆಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. 5 ಲಕ್ಷ ರೂಪಾಯಿಗಳ ನೆರವನ್ನೂ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಸಂಘಟನೆಯ ಸಕ್ರಿಯ ಕಾರ್ಯಕರ್ತ ಹರ್ಷ ಮತಾಂಧರ ಕುತಂತ್ರಕ್ಕೆ ಆತ ಬಲಿಯಾಗಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದವರು ಒಂಟಿಯಲ್ಲ. ಅವರ ಜತೆ ನಾವಿದ್ದೇವೆ. ಹರ್ಷನನ್ನು ಕಳೆದುಕೊಂಡ ನೋವು, ನಾಚಿಕೆ ನಮಗಿದೆ. ನಾನು ರಾಜು, ಕುಟ್ಟಪ್ಪ, ಪ್ರವೀಣ್ ಪೂಜಾರಿ ಹತ್ಯೆ ನೋಡಿದ್ದೇನೆ, ಅರಿತಿದ್ದೇನೆ ಎಂದರು.
ಹರ್ಷನದ್ದು, ಮಾಮೂಲಿ ಕೊಲೆಯಲ್ಲ ಐಪಿಸಿ 203 ಅಡಿ ಬರುವ ಪ್ರಕರಣ ಅಲ್ಲ. ಎಸ್ ಡಿಪಿಐ, ಕೆಎಫ್ ಡಿ ಯ ಪಾತ್ರ ಇದೆ. ಇದೊಂದು ಆರ್ಗನೈಸ್ಡ್ ಕ್ರೈಂ. ಯುಎಪಿಎ ಹಾಗೂ ಕೋಕಾ ಅಡಿ ಪ್ರಕರಣವಾಗಿದೆ ಎಂದರು.
ಕೊಲೆಗಾರರಿಗೆ ಯಾವುದೇ ಧರ್ಮ ಇಲ್ಲ ಎಂದಾದರೆ ಧರ್ಮ ನೋಡಿ ಏಕೆ ಕೊಲೆ ಮಾಡುತ್ತಿದ್ದಾರೆ. ಹರ್ಷ ಕೊಲೆ ನಡೆದು 1ವಾರ ಆದರೂ ಯಾವ ಕಾಂಗ್ರೆಸ್ಸಿಗನೂ ಭೇಟಿ ಕೊಟ್ಟಿಲ್ಲ. ಸಿನಿಮಾ ನೋಡಲು ಸಿದ್ಧರಾಮಯ್ಯ ಗೆ ಸಮಯ ಇದೆ. ಹರ್ಷನ ಮನೆಗೆ ಬರಲು ಸಮಯ ಇಲ್ಲ ಎಂದು ಕಿಡಿ ಕಾರಿದರು.
ಕನಿಷ್ಠ ಸಾಂತ್ವನ ಹೇಳಲು ಕಾಂಗ್ರೆಸ್ ನವರು ಬರದಿರುವುದು ನೋಡಿದಾಗ ಅವರ ಮನಸ್ಥಿತಿ ಏನೆಂಬುದು ತಿಳಿಯುತ್ತದೆ. ಮೀನು ಮಾರಾಟ ಮಾಡುವವನು ಸತ್ತಾಗ ನೆರವು ನೀಡುವ ಕಾಂಗ್ರೆಸ್ ಸರ್ಕಾರ ಏಕೆ ಮಾತನಾಡುತ್ತಿಲ್ಲ. ಜಮೀರ್ ಅಹ್ಮದ್ ನ್ನ ಮುಂದಿಟ್ಟುಕೊಂಡು ಸಿದ್ದರಾಮಯ್ಯ,ನಲಪಾಡ್ ಅವರನ್ನು ಮುಂದಿಟ್ಟುಕೊಂಡು ಡಿಕೆಶಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.