Advertisement

ಪರ್ಸೆಂಟೇಜ್ ಸರ್ಕಾರದ ವರದಿ ಕೇಳಲು ವರ್ಷ ಬೇಕೇ : ಎಂ.ಬಿ.ಪಾಟೀಲ್ ಪ್ರಶ್ನೆ

07:07 PM Jun 28, 2022 | Team Udayavani |

ವಿಜಯಪುರ: ರಾಜ್ಯದಲ್ಲಿ 40 ಪರ್ಸೆಂಟೇಜ್ ಸರ್ಕಾರ ಇದೆ ಎಂದು ವರ್ಷದ ಹಿಂದೆ ಗುತ್ತಿಗೆದಾರರ ಸಂಘ ಮಾಡಿದ ಆರೋಪಕ್ಕೆ ಪ್ರಧಾನಿ ಕಾರ್ಯಾಲಯ ಬಹು ಬೇಗನೇ ವರದಿ ಕೇಳಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.

Advertisement

ಮಂಗಳವಾರ ಸೋಮದೇವರಹಟ್ಟಿಯಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಗುತ್ತೇದಾರರು ಪರ್ಸೆಂಟೇಸ್ ಸರ್ಕಾರದ ವಿರುದ್ಧ  ಲಿಖಿತವಾಗಿ ದೂರು ನೀಡಿ ವರ್ಷವಾದರೂ ಸ್ಪಂದಿಸದ ಪ್ರಧಾನಿ ಕಾರ್ಯಾಲಯ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಸಂಸದ ಸಂಜಯ್ ರಾವತ್ 24 ಗಂಟೆಯಲ್ಲಿ ಇಡಿ ನೊಟೀಸ್ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಆದರೆ ವಿಪಕ್ಷಗಳ ನಾಯಕರ ವಿರುದ್ಧ ಬೇಕಾಬಿಟ್ಟಿಯಾಗಿ ಈಡಿ-ಐಟಿ ಅಂತೆಲ್ಲ ನೋಟೀಸ್ ಕೊಡುವ ಮೋದಿ ಸರ್ಕಾರ ರಾಜ್ಯದ ಗುತ್ತೇದಾರರ ಸಂಘ ಮಾಡಿರುವ ಭ್ರಷ್ಟಾಚಾರದ ಬಗ್ಗೆ ಭಾರಿ ಬೇಗನೇ ಕ್ರಮಕ್ಕೆ ಮುಂದಾಗಿದೆ ಎಂದು ಕುಟುಕಿದರು.

ರಾಜ್ಯದಲ್ಲಿ ವಿಧಾನಸಭೆ ಹತ್ತಿರ ಬರುತ್ತಿರುವ ಕಾರಣ ವರದಿ ಕೇಳುವ ನೆಪದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಿ, ಜನರ ಕಣ್ಣೊರಿಸುವ ತಂತ್ರ ಅನುಸರಿಸುತ್ತಿದೆ. ಆದರೆ ರಾಜ್ಯದ ಜನರು 40 ಪರ್ಸೆಂಟೇಸ್ ಸರ್ಕಾರದಿಂದ ರೋಷಿಹೋಗಿದ್ದು, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಷ್ಟಕ್ಕೂ ಭ್ರಷ್ಟಾಚಾರದ ವರದಿ ಕೇಳಿರುವ ಪ್ರಧಾನಿ ಕಾರ್ಯಾಲಯ ಏನು ತನಿಖೆ ಮಾಡಲಿದೆ, ಯಾರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದೆ, ಎಷ್ಟು ತನಿಖೆ ಮಾಡಲಿದೆ, ಯಾರನ್ನು ಬಂಧಿಸುತ್ತಾರೆ, ಯಾರಿಗೆ ಶಿಕ್ಷೆ ಕೊಡಿಸುತ್ತಾರೆ ಕಾದು ನೋಡೋಣ ಎಂದರು.

Advertisement

ಇದನ್ನೂ ಓದಿ: ನೂಪುರ್ ಗೆ ಬೆಂಬಲ:ಟೈಲರ್ ಶಿರಚ್ಛೇದನ,ವಿಡಿಯೋ ವೈರಲ್; ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ

ಮಹಾರಾಷ್ಟ್ರ ರಾಜಕೀಯ ದುಸ್ಥಿತಿಯ ಬೆಳವಣಿಗೆ ಆಪರೇಷನ್ ಕಮಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಾಜಕೀಯ ಕೆಟ್ಟ ಸಂಸ್ಕøತಿಗೆ ಬಿಜೆಪಿ ಮಣೆ ಹಾಕಿರುವುದು ಶೋಚನೀಯ ಎಂದು ಪಾಟೀಲ ವಿಷಾದಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ದೆಹಲಿ ದಿಢೀರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರನ್ನು ಪಕ್ಷದ ರಾಜ್ಯ ನಾಯಕರನ್ನು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧೀ ದೆಹಲಿಗೆ ಕರೆಸಿಕೊಳ್ಳುವುದು ಹೋಸದೇನಲ್ಲ. ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿ-ಗತಿಗಳ ಬಗ್ಗೆ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡುವುದು ಸಾಮಾನ್ಯ ಎಮದರು.

…………………………………………………………………………………………………………………………..

ಚಕ್ರತೀರ್ಥ ಸಮಿತಿ ಪೂರ್ಣ ಪಠ್ಯ ತಿರಸ್ಕರಿಸಿ: ಎಂ.ಬಿ.ಪಾಟೀಲ್

ವಿಜಯಪುರ: ಸರ್ಕಾರ ರೋಹಿತ್ ಚಕ್ರತೀರ್ಥ ರೂಪಿಸಿದ ಪಠ್ಯ ಪರಿಷ್ಕರಣೆ ಎಲ್ಲ ಪಠ್ಯವನ್ನು ಸಾರಾಸಗಟಾಗಿ ತಿರಸ್ಕರಿಸಬೇಕೆ ಹೊರತು, ಬಸವಣ್ಣನರ ಪಠ್ಯ ತಿದ್ದುಪಡಿಗೆ ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಆಗ್ರಹಿಸಿದರು.

ಬಸವಣ್ಣ, ಸಿದ್ಧಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ನಾರಾಯಣಗುರು, ಕುವೆಂಪು ಅವರಂಥ ಮಹಾತ್ಮರಿಗೆ ಅಪಮಾನ ಮಾಡಿರುವ ಪಠ್ಯ ತಿದ್ದುಪಡಿ ಮಾಡದೇ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ರೋಹ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜಿಸಿದಂತೆ ಸದರಿ ಸಮಿತಿ ನೀಡಿದ ಪರಿಷ್ಕೃತ ಪಠ್ಯಕ್ರಮ ತಿರಸ್ಕರಿಸಬೇಕು. ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಿಸಿದ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು

ಮುಂದಿನ ಪೀಳಿಗೆಗ ನೈ ಇತಿಹಾಸ ತಿಳಿಸಬೇಕಿದೆ. ಇದಕ್ಕಾಗಿ ತಿರುಚಿದ ಸಾಹಿತ್ಯ, ಪಠ್ಯಗಳನ್ನು ತಿರಸ್ಕರಿಸಬೇಕು. ಪಠ್ಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ಹೊಸ ಸಮಿತಿ ರಚಿಸಬೇಕು. ಶ್ರೇಷ್ಠ ಸಾಹಿತಿಗಳು, ಚಿಂತಕರು, ವಿದ್ವಾಂಸರು, ಇತಿಹಾಸಕಾರರ ನೇತೃತ್ವದ ಸಮಿತಿ ರಚಿಸಬೇಕು, ವಿಶ್ವಾಸಾರ್ಹತೆ ಹೊಂದಿದ ಜನರ ನೇತೃತ್ವದಲ್ಲಿ ಹೊಸ ಪಠ್ಯ ಪರಿಷ್ಕರಣಾ ಸಮಿತಿಗೆ ನೇಮಕವಾಗಲಿ ಎಂದು ಆಗ್ರಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next