ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸ್ರತ್ ಜಹಾನ್ ದುರ್ಗಾ ಮಾತೆಯ ಪೂಜೆ ಮಾಡಿದ್ದು, ಇದೀಗ ಹಲವರ ಕಣ್ಣು ಕೆಂಪಗಾಗಿಸಿದೆ.
ಸಂಸದೆ ನುಸ್ರತ್ ಜಹಾನ್ ದುರ್ಗಾ ಪೂಜೆ ನಡೆಸಿ ನಂತರ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಚಾರವಾಗಿ ಕೆಲವರಿಂದ ಆಕ್ರೋಶ ವ್ಯಕ್ತವಾಗಿದೆ.
ಇಸ್ಲಾಂ ಧರ್ಮವನ್ನು ಈ ರೀತಿ ಅವಮಾನಿಸುವ ಬದಲು ಹೆಸರನ್ನು ಬದಲಾಯಿಸಿಕೊಳ್ಳಿ ಎಂದು ಮೌಲ್ವಿಯೊಬ್ಬರು ನುಸ್ರತ್ ಜಹಾನ್ ಗೆ ಟೀಕೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ನುಸ್ರತ್, ಎಲ್ಲಾ ಧರ್ಮದ ಸೌಹಾರ್ಧತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ನಾನು ಮಾಡುತ್ತಿರುವುದು ಸರಿಯೆಂದು ನನಗನಿಸುತ್ತಿದೆ. ಎಲ್ಲಾ ಧರ್ಮದ ಹಬ್ಬಗಳನ್ನು ನಾವು ಆಚರಿಸಬೇಕು ಎಂದಿದ್ದಾರೆ.
ನುಸ್ರತ್ ಜಹಾನ್ ಇತ್ತೀಚೆಗೆ ಹಿಂದೂ ಧರ್ಮದ ನಿಖಿಲ್ ಜೈನ್ ಅವರನ್ನು ವರಿಸಿದ್ದರು. ಆ ಸಮಯದಲ್ಲೂ ಸ್ವಧರ್ಮೀಯರಿಂದ ವಿರೋಧ ವ್ಯಕ್ತವಾಗಿತ್ತು