Advertisement
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕಾರ್ಮಿಕರ ಪರ ಎಂದು ಹೇಳಿಕೊಂಡು ಉದ್ದೇಶಪೂರ್ವಕವಾಗಿ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ, ಸಂಘಟನೆಗಳವರು ಏನೇನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದರು.
Related Articles
Advertisement
ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ-ಭರವಸೆ: ವಿಸ್ಟ್ರಾನ್ ಕಂಪನಿ ಸಮಸ್ಯೆ ಪರಿಹಾರಕ್ಕೆ ಶೀಘ್ರಬೃಹತ್ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕಂಪನಿ ಹೆಚ್‌ಆರ್‌ಗಳು, ಎಂಡಿಗಳ ಸಭೆ ಹಾಗೂ ಕಾರ್ಮಿಕರ ಸಭೆಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹನುಮಪ್ಪ, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯ ಮುರಳಿ ಗೌಡ, ನಗರಾಭಿವೃದ್ದಿ ಪ್ರಾಕಾರದ ಸದಸ್ಯ ಅಪ್ಪಿನಾರಾಯಣಸ್ವಾಮಿ ಮತ್ತಿತರರಿದ್ದರು.
ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು :
ಇಂತಹ ಘಟನೆಗಳು ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು ತರುತ್ತವೆ. ಜಿಲ್ಲೆಯಲ್ಲಿಕೈಗಾರಿಕಾಭಿವೃದ್ಧಿಗೆ6 ಸಾವಿರ ಎಕರೆ ಜಾಗಗುರುತಿಸಿದ್ದೇವೆ. ಇನ್ನೂ ಕೈಗಾರಿಕೆಗಳುಬರಲಿವೆ ಎಂದು ಸಂಸದರು ತಿಳಿಸಿದರು. ಚೀನಾ ಮಾಧ್ಯಮಗಳು ಭಾರತಕ್ಕೆ ಹೋದರೆ ಇಂತಹ ಗತಿ ಬರುತ್ತವೆ ಎಂದುವಿಸ್ಟ್ರಾನ್ ಕಂಪನಿ ಘಟನೆ ಉದಾಹರಿಸಿ ಇತರೆ ಕಂಪನಿಗಳಿಗೆ ಎಚ್ಚರಿಕೆ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ಉದ್ಯೋಗದಾತರ ಪರ ಸರ್ಕಾರಗಳಿವೆ, ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಅಶೋಕ್, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೂಡಿಕೆದಾರರೊಂದಿಗೆ ಮಾತನಾಡಿ ಸೌಹಾರ್ದತೆಕಾಪಾಡಿಕೊಂಡಿದ್ದಾರೆ ಯಾವುದೇ ಕಂಪನಿಗಳು ಎಲ್ಲೂಹೋಗಲ್ಲ ಎಂದರು.