Advertisement
ಅವರೇ ಸೃಷ್ಟಿಸಿದ ಎತ್ತಿನಹೊಳೆ ಯೋಜನೆ 10 ವರ್ಷ ಕಳೆದರೂ ಈ ಭಾಗಕ್ಕೆ ನೀರು ಹರಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದು ಸಿಪಿಎಂ ಪಕ್ಷದ ಮಾಜಿ ಶಾಸಕ ಬಾಗೇಪಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಟೀಕಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಪಿಎಂ ಪಕ್ಷ ಈ ಬಾರಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿದೆ ಎಂದು ತಿಳಿಸಿದರು.
Related Articles
Advertisement
ಪಶ್ಚಿಮ ಘಟ್ಟಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಹರಿಸಬಹುದು. ಅದು ಕೇವಲ 10 ಟಿಎಂಸಿ ನೀರು ಮಾತ್ರ ಲಭ್ಯವಾಗುತ್ತದೆ. ಆದರೆ ಯೋಜನೆಯಲ್ಲಿ 24 ಟಿಎಂಸಿ ನೀರು ಸಿಗುತ್ತದೆ ಎಂದು ಅವೈಜ್ಞಾನಿಕವಾಗಿ ಹೇಳಲಾಗುತ್ತಿದೆ. ಎತ್ತಿನಹೊಳ ಯೋಜನೆ ಹೆಸರಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರಗಳು ಕೇವಲ ಪೈಪ್ ಲಾಬಿಗೆ ಮಣಿದು ಹೆಚ್.ಎನ್, ಕೆ.ಸಿ.ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ರೂಪಿಸಲಾಗಿದೆ. ಈ ಮೂರು ಯೋಜನೆಗಳಿಂದ ಮುಕ್ಕಾಲು ಭಾಗ ನೀರು ಕೂಡ ಈ ಭಾಗಕ್ಕೆ ಬರುವುದಿಲ್ಲ. ಈ ಯೋಜನೆಗಳಿಂದ ಈ ಭಾಗದ ಶಾಶ್ವತವಾದ ನೀರಾವರಿ ಸಮಸ್ಯೆ ಬಗೆಹರಿಯುವುದಿಲ್ಲ.
ಡಾ.ಪರಮಶಿವಯ್ಯ ಯೋಜನೆ ಅನುಷ್ಠಾನಕ್ಕೆ ತಂದರೆ ಮಾತ್ರ ಈ ಭಾಗಕ್ಕೆ ನೀರು ಸಿಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗುಡಿಬಂಡೆ ಜಯರಾಮರೆಡ್ಡಿ, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಚೆನ್ನರಾಯಪ್ಪ, ಬಿ.ಎನ್.ಮುನಿಕೃಷ್ಣಪ್ಪ, ಜೆಸಿಬಿ ಮಂಜುನಾಥ, ಬಾಗೇಪಲ್ಲಿ ಅಕ್ರಂಪಾಷ, ಗುಡಿಬಂಡೆ ಎಚ್.ಪಿ.ಲಕ್ಷ್ಮೀನಾರಾಯಣರೆಡ್ಡಿ ಇದ್ದರು.
ಮಾ.25 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ಭಾಗಕ್ಕೆ ಡಾ.ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. -ಜಿ.ವಿ.ಶ್ರೀರಾಮರೆಡ್ಡಿ, ಮಾಜಿ ಶಾಸಕ