Advertisement

ಭೋಪಾಲ್ ಟು ದಿಲ್ಲಿ; ನಾಲ್ವರಿಗಾಗಿ 180 ಸೀಟಿನ ವಿಮಾನ ಬಾಡಿಗೆ ಪಡೆದ ಮದ್ಯದ ದೊರೆ

04:53 PM May 28, 2020 | Nagendra Trasi |

ನವದೆಹಲಿ: ಕೋವಿಡ್ 19 ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ಊರಿಗೆ ತೆರಳಲು ಇನ್ನೂ ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಮಧ್ಯಪ್ರದೇಶದ ಮದ್ಯದ ದೊರೆಯೊಬ್ಬರು ಕೇವಲ ನಾಲ್ಕು ಜನರಿಗಾಗಿ 180 ಸೀಟಿನ ವಿಮಾನವನ್ನೇ ಬಾಡಿಗೆ ಪಡೆದಿರುವ ಘಟನೆ ನಡೆದಿದೆ.

Advertisement

ತನ್ನ ಮಗಳು, ಇಬ್ಬರು ಮೊಮ್ಮಕ್ಕಳು ಹಾಗೂ ಮಗುವಿನ ದಾದಿ ಭೋಪಾಲ್ ನಿಂದ ದಿಲ್ಲಿಗೆ ತೆರಳಲು ಮಧ್ಯಪ್ರದೇಶದ ಮದ್ಯದ ದೊರೆ, ಉದ್ಯಮಿ ಜಗದೀಶ್ ಆರೋರಾ ಏರ್ ಬಸ್ ಎ320 ಅನ್ನು ಬಾಡಿಗೆಗೆ ಪಡೆದಿರುವುದಾಗಿ ವರದಿ ವಿವರಿಸಿದೆ.

ಎ320 ಏರ್ ಬಸ್ 180 ಮಂದಿ ಪ್ರಯಾಣಿಕರನ್ನು ಕರೆದೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಆರೋರಾ ಸೋಮ್ ಡಿಸ್ಟಿಲರೀಸ್ ಮಾಲಕರಾಗಿದ್ದು, ಈ ವಿಮಾನವನ್ನು ಬಾಡಿಗೆಗೆ ಪಡೆದಿದ್ದರು. ಬೆಳಗ್ಗೆ 9-30ಕ್ಕೆ ದಿಲ್ಲಿಯಿಂದ ಹೊರಟು 10-30ಕ್ಕೆ ಭೋಪಾಲ್ ತಲುಪಿತ್ತು. ನಾಲ್ವರು ವಿಮಾನವೇರಿದ ಬಳಿಕ ಭೋಪಾಲ್ ನಿಂದ ಹೊರಟು 11=30ಕ್ಕೆ ದೆಹಲಿ ತಲುಪಿತ್ತು ಎಂದು ವರದಿ ತಿಳಿಸಿದೆ.

ಕೋವಿಡ್ 19 ವೈರಸ್ ಹರಡುವ ಭಯದಿಂದ ಆರೋರಾ ಏರ್ ಬಸ್ ಬಾಡಿಗೆಗೆ ಪಡೆದಿರುವುದಾಗಿ ವರದಿ ಹೇಳಿದೆ. ಒಂದು ಅಂದಾಜಿನ ಪ್ರಕಾರ, ಆರೋರಾ ಅವರು ಭೋಪಾಲ್ ನಿಂದ ದಿಲ್ಲಿಗೆ ನಾಲ್ವರನ್ನು ಕಳುಹಿಸಲು 25ರಿಂದ 30ಲಕ್ಷ ರೂಪಾಯಿ ವ್ಯಯಿಸಿರಬಹುದು ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next