Advertisement

ಸಂಸದ ಖರ್ಗೆ ವ್ಯಕ್ತಿಯಲ್ಲ-ಶಕ್ತಿ

12:06 PM Jul 22, 2017 | Team Udayavani |

ಕಲಬುರಗಿ: ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ವ್ಯಕ್ತಿಯಲ್ಲ ಈ ಭಾಗದ ಶಕ್ತಿ ಎಂದು ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ರಾಮಮಂದಿರ ಬಳಿಯ ಶಿವಶರಣ ಹರಳಯ್ಯ ಸಮಾಜದ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಶಾಲಾ ಮಕ್ಕಳಿಗಾಗಿ ವಿಶ್ವಜ್ಯೋತಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಅವರು ಮಾತನಾಡಿದರು. ಖರ್ಗೆಯವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಡಾ| ಅಂಬೇಡ್ಕರರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ತತ್ವಕ್ಕೆ ಬದ್ಧರಾಗಿದ್ದಾರೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕಾಯಕ ಕೈಲಾಸವೆಂದು ಹೇಳಿದ್ದರು. ಅದನ್ನು ಖರ್ಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು.

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಖರ್ಗೆ ಹುಟ್ಟು ಹೋರಾಟಗಾರರು, ಬಡತನದಲ್ಲಿ ಬೆಳೆದು ಬಂದವರು. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸಿ ಹಾಕುವುದಕ್ಕೆ ಪ್ರಯತ್ನ ಮಾಡಿದವರು ಎಂದರು. 

ಪವನಕುಮಾರ ವಳಕೇರಿ, ಮಲ್ಲಣ್ಣಗೌಡ ನಂದಿಕೂರ, ಪರಮೇಶ್ವರ ಶಟಕಾರ, ಪರಮಾನಂದ ಹೂಗಾರ ಗುರುಸಣಗಿ, ಶ್ರೀಕಾಂತ ಪಾಟೀಲ ತಿಳಗೂಳ, ಪ್ರಸನ್ನ ವಾಂಜರಖೇಡೆ, ಶಿವಕುಮಾರ ಧರ್ಮಗೊಂಡ, ರವಿ ಹರಗಿ, ವೀರಭದ್ರಪ್ಪ, ಪತ್ರಕರ್ತ ಸಂತೋಷ ನಡಗಿರಿ, ಪಂಚಾಕ್ಷರಿ ಯಡ್ಲಾ, ಸಚೀನ ಪಡೋಳಕರ, ಶಿವಕುಮಾರ ಸಿ.ಎಚ್‌ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next