ಬೆಂಗಳೂರು: ಟಿಪ್ಪು ಸುಲ್ತಾನ್ ಈ ನೆಲದ ಮಗ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿರುವುದು ಸತ್ಯ. ಯಡಿಯೂರಪ್ಪ ಹೇಳಿದ್ದೂ ಸತ್ಯ. ಚುನಾವಣೆ ದೃಷ್ಟಿ ಇಟ್ಟುಕೊಂಡು ಇತಿಹಾಸ ಬದಲಾಯಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಎಂಎಲ್ ಸಿ ವಿಶ್ವನಾಥ್ ಹೇಳಿರೋ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ದನ್ನೂ ಅಲ್ಲಗಳೆಯಲು ಆಗಲ್ಲ. ರಾಷ್ಟ್ರಪತಿಗಳು ಟಿಪ್ಪು ಹೊಗಳಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಇತಿಹಾಸ ತಿರುಚುವುದು, ಕುಮ್ಮಕ್ಕು ಕೊಡುವುದು, ಜನರ ಭಾವನೆ ಬೇರೆಡೆ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಟಿಪ್ಪು ಸುಲ್ತಾನ್ ಕೂಡ ಈ ದೇಶಕ್ಕೆ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಆಚರಣೆಗಳೂ ಕೂಡ ಮುಂದುವರೆಯಬೇಕು ಎಂದರು.
ಇದನ್ನೂ ಓದಿ: ಬೆಂಗಳೂರು: ಒಂದು ಕೋಟಿ ಮೌಲ್ಯದ 204 ಕೆಜಿ ಗಾಂಜಾ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
ಸಿಎಂ ಬಿಎಸ್ ವೈ ನೆರೆ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಮಾಡಿದ್ದು, ಕೇವಲ ಕಣ್ಣೊರೆಸುವ ತಂತ್ರ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ. ಕಳೆದ ಬಾರಿ ಅನೇಕ ಭರವಸೆ ಘೋಷಣೆ ಮಾಡಿದ್ದರು. ಆ ಭರವಸೆಗಳೇ ಇದುವರೆಗೆ ಈಡೇರಿಲ್ಲ. ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ವಸ್ತು ಸ್ಥಿತಿ ತಿಳಿದುಕೊಳ್ಖುವ ಸಣ್ಣ ಮಾನವೀಯತೆಯನ್ನೂ ತೋರಿಸಿಲ್ಲ ಎಂದರು.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ನಶೆ ನಂಜು: ನಟ, ಗಾಯಕರಿಗೆ ಮಾದಕ ವಸ್ತು ನೀಡುತ್ತಿದ್ದ ಗ್ಯಾಂಗ್ ಬಂಧನ