Advertisement

ಮಧ್ಯಪ್ರದೇಶ: ಕ್ಷಮೆ ಬಳಿಕ ಮದುವೆ ಮಾಡಿಸಿದ ಮೌಲ್ವಿ

07:38 PM Feb 19, 2023 | Team Udayavani |

ಭೋಪಾಲ್‌: ಜೋರಾದ ಧ್ವನಿಯಲ್ಲಿ ಡಿಜೆ ಸಂಗೀತ ಹಾಕಿದ ಕಾರಣ ಮದುವೆ ಮಾಡಿಸಲು ಮೌಲ್ವಿಯೊಬ್ಬರು ನಿರಾಕರಿಸಿದ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಮೌಲ್ವಿ ಆಗಮಿಸಿದ್ದ ವೇಳೆ ಡಿಜೆ ಸಂಗೀತ ಹಾಕಲಾಗಿತ್ತು. ಇದರಿಂದ ಕ್ರೋಧಗೊಂಡ ಅವರು, ಮದುವೆ ಮಾಡಿಸಲು ನಿರಾಕರಿಸಿದರು. ವಧು ಮತ್ತು ವರನ ಕುಟುಂಬದವರು ಕ್ಷಮೆ ಕೇಳಿದ ನಂತರ, ಮದುವೆ ಕಾರ್ಯ ನಡೆಯಿತು.

ಈ ಕುರಿತು ಪ್ರತಿಕ್ರಿಯಿಸಿದ ಮೌಲ್ವಿ, “ಮುಸ್ಲಿಂ ಸಮುದಾಯದ ಮದುವೆಗಳಲ್ಲಿ ಡಿಜೆ ಸಂಗೀತ ಮತ್ತು ನೃತ್ಯಕ್ಕೆ ನಿರ್ಬಂಧವಿದೆ. ಮದುವೆಗಳಲ್ಲಿ ಡಿಜೆ, ನೃತ್ಯ ಮಾಡುವುದು ಅಸಭ್ಯ ವರ್ತನೆ ಎಂದೆನಿಸುತ್ತದೆ,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next