Advertisement
ತುಮಕೂರು: ಕೋವಿಡ್ -19ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಮಂದಿರಗಳಲ್ಲಿ ಶೋ ಆರಂಭವಾಗಿವೆ. ಸರ್ಕಾರದ ಮಾರ್ಗಸೂಚಿಅನ್ವಯ ಜಿಲ್ಲಾದ್ಯಂತ ಕಳೆದ ಹತ್ತು ತಿಂಗಳಿನಿಂದ ಚಟುವಟಿಕೆ ಇಲ್ಲದೇ ಧೂಳಿಡಿದಿದ್ದಚಿತ್ರಮಂದಿರಗಳು ಸ್ವತ್ಛವಾಗಿ ಸಿದ್ಧಗೊಂಡು ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡಲು ಚಿತ್ರ ಪ್ರದರ್ಶನಗಳು ಆರಂಭಗೊಂಡಿವೆ.
Related Articles
Advertisement
ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆ : ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಚಿತ್ರಮಂದಿರಗಳಲ್ಲಿ ಚಿತ್ರ ನೋಡಲು ಬರುವವರಿಗೆ ಟಿಕೆಟ್ ದರ ಹೆಚ್ಚಳವಾಗಿದೆ ಎನ್ನುವ ಕಾರಣಕ್ಕೆ ಜನ ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬರುವವರ ಸಂಖ್ಯೆ ಕ್ಷೀಣಿಸಿದೆ.
ಜಿಲ್ಲೆಯಲ್ಲಿವೆ 28 ಚಿತ್ರಮಂದಿರಗಳು :
ಜಿಲ್ಲೆಯಲ್ಲಿ 28 ಚಿತ್ರಮಂದಿರಗಳೀದ್ದು ನಗರದಲ್ಲಿರುವ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಕೋವಿಡ್ ಭೀತಿ ಹಿನ್ನೆಲೆ ಚಿತ್ರ ಪ್ರೇಮಿಗಳಿಗೆತೊಂದರೆ ಯಾಗಬಾರದು ಎಂದು ಚಿತ್ರಮಂದಿರ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ.ಚಿತ್ರ ಮಂದಿರವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಮಾಲೀಕರು ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರಿಗೆ ತೊಂದರೆ ಆಗದಂತೆ ಗಮನ ನೀಡಿದ್ದಾರೆ.
ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದ ಪ್ರೇಕ್ಷಕರು :
ಚಿತ್ರಮಂದಿರಗಳಲ್ಲಿ ಹೊಸ ಚಿತ್ರ ಬಿಡುಗಡೆಯಾಗಿತು ಎಂದರೆ ಸುತ್ತ ಮುತ್ತಲ ಹಳ್ಳಿಗಳಿಂದ ಜನ ಜಿಲ್ಲಾ ಕೇಂದ್ರಕ್ಕೆ ಬಂದುಸಿನಿಮಾ ನೋಡಿಕೊಂಡು ಹೋಗುತ್ತಿದ್ದರು, ಅಂದು ಹೊಸ ಚಿತ್ರವನ್ನು ಮೊದಲು ಜಿಲ್ಲಾ ಕೇಂದ್ರದಲ್ಲಿ, ನಂತರ ತಾಲೂಕು ಆ ಮೇಲೆ ಹೋಬಳಿಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗುತಿತ್ತು. ಆಗ ಚಿತ್ರ ಚೆನ್ನಾಗಿದೆ ಎಂದರೆ ಜಿಲ್ಲಾಕೇಂದ್ರಕ್ಕೆ ಬಂದು ನೋಡಿಕೊಂಡು ಹೋಗುತ್ತಿದ್ದರು, ಇನ್ನು ತಾಲೂಕಿಗೆ ಬಂದಾಗಲೂ ಸಿನಿಮಾ ನೋಡುವ ಮಂದಿ ಇದ್ದರು. ಆದರೆ ಈಗ ಸ್ಯಾಟಲೈಟ್ ಮೂಲಕ ಏಕಕಾಲದಲ್ಲಿ ಎಲ್ಲಾ ಕಡೆ ಚಿತ್ರಗಳು ಪ್ರದರ್ಶನ ಗೊಳ್ಳುವುದರಿಂದ ಚಿತ್ರಮಂದಿರಗಳಿಗೆ ಬರುತ್ತಿದ್ದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ.
ಪ್ರೇಕ್ಷಕರ ಅಚ್ಚುಮೆಚ್ಚಿನ ಚಿತ್ರಮಂದಿರಗಳು :
ತುಮಕೂರು: ಗಾಯತ್ರಿ, ಕೃಷ್ಣ, ಮಾರುತಿ, ಪ್ರಮುಖ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡುವ ಚಿತ್ರಮಂದಿರಗಳು ಇದರಲ್ಲಿ ಗಾಯತ್ರಿ ಚಿತ್ರ ಮಂದಿರದಲ್ಲಿ ಡಾ.ರಾಜ್ ಕುಟುಂಬದ ಚಿತ್ರಗಳು ಹಚ್ಚು ಬಿಡುಗಡೆ ಯಾಗುತ್ತಿದ್ದವು ಇಂದಿಗೂ ಚಿತ್ರಪ್ರೇಮಿಗಳಿಗೆ ಈ ಮೂರು ಚಿತ್ರಮಂದಿರಗಳು ಚಿತ್ರ ಪ್ರದರ್ಶನ ನೀಡುತ್ತಿವೆ ಆದರೆ ಪ್ರೇಕ್ಷಕರು ಬರುತ್ತಿಲ್ಲ. ಗಡಿನಾಡು ಪಾವಗಡದಲ್ಲಿ ಮಾರುತಿ, ಶ್ರೀನಿವಾಸ ಅಲಂಕಾರ ವೈ.ಎನ್. ಹೊಸಕೋಟೆಯಲ್ಲಿ ಲಕ್ಷ್ಮೀ ವೆಂಕಟೇಶ್ವರ ಚಿತ್ರಮಂದಿರಗಳು ಪ್ರದರ್ಶನ ನೀಡುತ್ತಿವೆ. ಶಿರಾ ನಗರದಲ್ಲಿ ರಂಗನಾಥ, ಸಪ್ತಗಿರಿ, ಭಾಗ್ಯ ಲಕ್ಷ್ಮೀ ತುರುವೇಕೆರೆ ಪೂರ್ಣಿಮಾ, ಕೃಷ್ಣ,
ತಿಪಟೂರು: ಗಣೇಶ, ಲಕ್ಷ್ಮೀ, ತ್ರಿಮೂರ್ತಿ, ಕೊರಟಗೆರೆ ಶಿವಗಂಗಾ, ಮಧುಗಿರಿ ಶಾಂತಲಾ,
ರಾಜ ರಾಜೇಶ್ವರಿ, ಚಿಕ್ಕನಾಕನಹಳ್ಳಿ ಲಕ್ಷ್ಮೀನರಸಿಂಹ, ಶ್ರೀನಿವಾಸ ಗುಬ್ಬಿ ಚನ್ನಬಸವೇಶ್ವರ ಚಿತ್ರಮಂದಿರಗಳು ಸೇರಿದಂತೆ 28 ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದೆ.
ಇತಿಹಾಸ ಸೇರಿದ ತಿಪಟೂರಿನ ವಿನೋದ :
ಜಿಲ್ಲೆಯ ತಿಪಟೂರಿನ ವಿನೋದ ಚಿತ್ರ ಮಂದಿರ ಮತ್ತು ತುಮಕೂರಿನ ವಿನೋದ ಚಿತ್ರಮಂದಿರಗಳು ಈಗ ಇತಿಹಾಸ ಪುಟ ಸೇರಿವೆ. ಇಲ್ಲಿ ವಿನೋದ ಚಿತ್ರ ಮಂದಿರ ಇತ್ತು ಎಂದು ಹೇಳುವಂತ್ತಾಗಿದೆ. ತುಮಕೂರಿನ ಮಂಡಿಪೇಟೆಯಲ್ಲಿ ಇದ್ದ ವಿನೋದ ಚಿತ್ರಮಂದಿರ ಮೆಟ್ರೋ ಆಗಿದೆ. ತಿಪಟೂರು ವಿನೋದ ಚಿತ್ರಮಂದಿರ ಹೊಡೆದು ಹಾಕಲಾಗಿದೆ.
ಅದು ಒಂದು ಕಾಲ ಇತ್ತು ಸಿನಿಮಾಮಂದಿರಗಳಿಗೆ ಜನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ನಮ್ಮ ಗಾಯತ್ರಿ ಚಿತ್ರಮಂದಿರದಲ್ಲಿ ಡಾ.ರಾಜ್ ಕುಮಾರ್ ಅವರ ಚಿತ್ರ ಹಾಕಿದರೆ ಪ್ರತಿದಿನವೂ ಹೌಸ್ ಪುಲ್ ಆಗುತ್ತಿತ್ತು, ಅಣ್ಣನವರ ಚಿತ್ರಗಳುನೂರುದಿನ ಪ್ರದರ್ಶನ ಕಂಡಿವೆ. ಕೊರೊನಾ ದಿಂದ ಹತ್ತು ತಿಂಗಳು ಪ್ರದರ್ಶನ ನಿಂತಿತ್ತು ಈಗ ಪ್ರದರ್ಶನಗಳು ಆರಂಭವಾಗಿವೆ. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ, ಮುಂದೆ ಪ್ರೇಕ್ಷಕರು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ.-ರುದ್ರೇಶ್,ಮಾಲೀಕರು ಗಾಯತ್ರಿ ಚಿತ್ರಮಂದಿರ.
ಕಳೆದ ಹತ್ತು ತಿಂಗಳಿನಿಂದ ಚಿತ್ರಮಂದಿರಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತ ಮಾಡಲಾಗಿತ್ತು ಈಗ ಸರ್ಕಾರ ಕೊರೊನಾ ಮಾರ್ಗಸೂಚಿ ನೀಡಿ ನೂರರಷ್ಟು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶಿಸಲು ಅನುವು ಮಾಡಿದ್ದೇವೆ. ಚಿತ್ರ ಪ್ರದರ್ಶನಗಳು ನಡೆಯುತ್ತಿವೆ ನಮ್ಮ ನಿರೀಕ್ಷೆಯಂತೆ ಚಿತ್ರ ಪ್ರೇಮಿಗಳು ಬರುತ್ತಿಲ್ಲ ಮುಂದೆ ಹೆಸರಾಂತ ನಟರ ಚಿತ್ರಗಳು ಬಿಡುಗಡೆಯಾದರೆ ಪ್ರೇಕ್ಷಕರು ಹೆಚ್ಚು ಬರಬಹುದು ಎಂದು ನಿರೀಕ್ಷೆ ಹೊಂದಿದ್ದೇವೆ. – ಚಿತ್ರ ಮಂದಿರ ಮಾಲೀಕರು,
ನಾವು ಕಳೆದ ಹನ್ನೊಂದು ತಿಂಗಳಿನಿಂದ ಕೋವಿಡ್ ದಿಂದ ಸಂಕಷ್ಟ ಅನುಭವಿಸಿದ್ದೇವೆ. ಈಗ ಪ್ರದರ್ಶನ ಆರಂಭವಾಗಿದೆ ಆದರೆ ಇನ್ನೂ ಜನ ಬರುತ್ತಿಲ್ಲ ಒಳ್ಳೆಯ ಸಿನಿಮಾ ಬಿಡುಗಡೆಯಾದರೆಅನುಕೂಲವಾಗುತ್ತದೆ. ಹಳೆ ಸಿನಿಮಾ ಹಾಕಿ ದರೆ, ಬೇರೆ ಭಾಷೆ ಸಿನಿಮಾ ಹಾಕಿದರೆ ಅಷ್ಟು ಜನ ಬರುವುದಿಲ್ಲ, ಸಿನಿಮಾ ಬಿಡುಗಡೆಯಾದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ ನಮಗೂ ಅನುಕೂಲವಾಗುತ್ತದೆ. – ಚಿತ್ರಮಂದಿರ ಕೆಲಸಗಾರ.
– ಚಿ.ನಿ.ಪುರುಷೋತ್ತಮ್