Advertisement

ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ : ಪ್ರೇಕ್ಷಕರನ್ನು ಸೆಳೆಯಲು ಮುಂದುವರೆದ ಕಸರತ್ತು

12:29 PM Nov 18, 2020 | Suhan S |

ಸಿನಿಪ್ರಿಯರನ್ನು ಮತ್ತೆ ಥಿಯೇಟರ್‌ಗಳು- ಮಲ್ಟಿಪ್ಲೆಕ್ಸ್‌ಗಳತ್ತಕರೆತರಲು ಸ್ವತಃ ಕನ್ನಡ ಚಿತ್ರರಂಗದ ತಾರೆಯರೇ ಅಖಾಡಕ್ಕೆ ಇಳಿದಿದ್ದಾರೆ. ಇದರ ಭಾಗವಾಗಿ “ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ’ ಎನ್ನುವ ಹೆಸರಿನಲ್ಲಿ ಕಲಾವಿದರು ಒಂದು ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.

Advertisement

ಕೋವಿಡ್ ಲಾಕ್‌ಡೌನ್‌ನಿಂದಾಗಿ ಬಂದ್‌ ಆಗಿದ್ದ, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪುನಃ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಶರತ್ತುಬದ್ಧ ಅನುಮತಿ ನೀಡಿದೆ. ಇದೇ ಖುಷಿಯಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಕೂಡ ಭರ್ಜರಿಯಾಗಿಯೇ ಪುನಾರಂಭಗೊಂಡು ಪ್ರೇಕ್ಷಕರ ಸ್ವಾಗತಕ್ಕೆ ನಿಂತಿವೆ. ಅದರ ಭಾಗವಾಗಿ ಈಗಾಗಲೇ ಸೂಪರ್‌ ಹಿಟ್‌ ಆದ ಒಂದಷ್ಟು ಸ್ಟಾರ್‌ ನಟರ ಸಿನಿಮಾಗಳು ರೀ-ರಿಲೀಸ್‌ ಆಗಿದ್ದವು. ಆದರೆ ಥಿಯೇಟರ್‌ಗಳು – ಮಲ್ಟಿಪ್ಲೆಕ್ಸ್‌ಗಳು ತೆರೆದು ಒಂದು ತಿಂಗಳಾಗುತ್ತ ಬಂದರೂ, ಅಂದುಕೊಂಡಂತೆ ಪ್ರೇಕ್ಷಕ ಪ್ರಭುಗಳು ನಿರೀಕ್ಷಿತ ಸಂಖ್ಯೆಯಲ್ಲಿ ಥಿಯೇಟರ್‌ಗಳಕಡೆಗೆ ಮುಖ ಮಾಡುತ್ತಿಲ್ಲ. ಇದು ಸಹಜವಾಗಿಯೇ ಚಿತ್ರರಂಗದ ಮಂದಿಯ ಆತಂಕ, ಬೇಸರ ಎರಡಕ್ಕೂ ಕಾರಣವಾಗಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಚಿತ್ರೋದ್ಯಮದ ಮಂದಿ ಪ್ರೇಕ್ಷಕರನ್ನು ಥಿಯೇಟರ್‌ಗಳು – ಮಲ್ಟಿಪ್ಲೆಕ್ಸ್‌ ಗಳತ್ತಕರೆತರುವಕರಸತ್ತು ಮುಂದುವರೆಸಿದ್ದಾರೆ.

ಹೌದು, ಕೋವಿಡ್ ಆತಂಕದಿಂದ ಬೆಚ್ಚಿ, ಮನೆಯಲ್ಲೇ ಬೆಚ್ಚಗೇಕುಳಿತ ಸಿನಿಪ್ರಿಯರನ್ನು ಮತ್ತೆ ಥಿಯೇಟರ್‌ಗಳು – ಮಲ್ಟಿಪ್ಲೆಕ್ಸ್‌ಗಳತ್ತ ಕರೆತರಲು ಸ್ವತಃಕನ್ನಡ ಚಿತ್ರರಂಗದ ತಾರೆಯರೇ ಅಖಾಡಕ್ಕೆ ಇಳಿದಿದ್ದಾರೆ. ಅದರ ಭಾಗವಾಗಿ ಈಗ ಸೋಶಿಯಲ್‌ ಮೀಡಿಯಾಗಳನ್ನು ವೇದಿಕೆಗಳನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, “ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ’ ಎನ್ನುವ ಹೆಸರಿನಲ್ಲಿಕನ್ನಡದಕಲಾವಿದರು ಒಂದು ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ವಿತರಕ ಕಾರ್ತಿಕ್‌ ಗೌಡ ನೇತೃತ್ವದಲ್ಲಿ ಚಿತ್ರಮಂದಿರಗಳ ಬಗ್ಗೆ ಮತ್ತೆ ಜನರನ್ನು ವಾಪಸ್‌ ಚಿತ್ರಮಂದಿರಕ್ಕೆಕರೆತರುವ ಬಗ್ಗೆ ಒಂದು ಭಾವನಾತ್ಮಕ ವಿಡಿಯೋವನ್ನು ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. “ಕೆಆರ್‌ಜಿ ಸ್ಟುಡಿಯೋಸ್‌’ ಈ ವಿಡಿಯೋವನ್ನು ನಿರ್ಮಿಸಿದ್ದು, ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜಕುಮಾರ್‌, ಗಣೇಶ್‌, ಶ್ರೀಮುರಳಿ, ದುನಿಯಾ ವಿಜಯ್, ಧನಂಜಜ್ ಮೊದಲಾದ ಸ್ಟಾರ್ ಪ್ರೇಕ್ಷಕರನ್ನು ಥಿಯೇಟರ್‌ಗೆ ಬರುವಂತೆ ಆಹ್ವಾನಿಸಿದ್ದಾರೆ.

ಇನ್ನು ಈ ವಿಡಿಯೋಗೆ ಸಾಮಾಜಿಕ ತಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿ ಅನೇಕರು ಭಾವುಕರಾಗುತ್ತಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿರುವ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌, “ಈ ವಿಡಿಯೋ ನೋಡಿ ಕಣ್ಣೀರು ಬಂತು. ಮೊದಲಿನ ದಿನಗಳು ಮತ್ತೆ ಬರಬೇಕು.  ಶಿಳ್ಳೆಯ ಶಬ್ದ ಮತ್ತೆಕೇಳಿಸಬೇಕು, ಸಿನಿಮಾ ಪೋಸ್ಟರ್‌ಗಳು ರಾರಾಜಿಸಬೇಕು, ಶರ್ಟ್‌ ಹರಿದು ಹೋಗುವ ರೀತಿ ಪ್ರೇಕ್ಷಕರು ಸಂಭ್ರಮಿಸುವುದನ್ನ ನೋಡಬೇಕು. ಚಿತ್ರ ಮಂದಿರಗಳು, ನಮ್ಮ ತಾಯಿ’ ಎಂದು ಭಾವುಕರಾಗಿ ಬರೆದುಕೊಂಡಿದ್ದು,ಕನ್ನಡ ಸಿನಿಮಂದಿಯ ಇಂಥದ್ದೊಂದು ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ವಿಡಿಯೋದಲ್ಲಿ ಅಂತದ್ದೇನಿದೆ? :  ಕೋವಿಡ್ ಲಾಕ್‌ಡೌನ್‌ನಿಂದಾಗಿ ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರಗಳು ಓಪನ್‌ ಆಗಿವೆ. ಈಗಲಾದರೂ ಪ್ರೇಕ್ಷಕರು ಚಿತ್ರಮಂದಿರಗಳಕಡೆಗೆ ಬರುವಂತಾಗಲಿ ಎಂದು ಚಿತ್ರರಂಗದ ಮಂದಿ ಕಾಯುತ್ತಿದ್ದಾರೆ. ಅಭಿಮಾನಿಗಳು ಮತ್ತು ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ, ಕೂಗು,ಕುಣಿತ, ಪಟಾಕಿ ಸೌಂಡ್‌ ಇಂಥ ಸಂಭ್ರಮವನ್ನೆಲ್ಲ ಮತ್ತೆ ನೋಡಬಹುದಾ? ಥಿಯೇಟರ್‌ಗಳಲ್ಲಿ ಮತ್ತೆ ಹಳೆಯ ದಿನಗಳು ಮರುಕಳಿಸುತ್ತಾ? ಎನ್ನುವ ಸಂಗತಿಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ­

Advertisement

Udayavani is now on Telegram. Click here to join our channel and stay updated with the latest news.

Next